ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ

13GKK2
Published on

ಗೋಕಾಕ: ಆರೋಗ್ಯ, ಶಿಕ್ಷಣ ಹಾಗೂ ಸಂಸ್ಕಾರ ಸಾಧನೆಯ ಆಧಾರ ಸ್ತಂಭಗಳಾಗಿವೆ ಎಂದು ಕೆಎಲ್‌ಇ ಸಂಸ್ಥೆಯ ಸಿ.ಎಸ್.ಅಂಗಡಿ ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಬಿ.ಮೇವುಂಡಿಮಠ ಹೇಳಿದರು.

ತಾಲೂಕಿನ ಕೆಎಲ್‌ಇ ಸಂಸ್ಥೆಯ ಸಿ.ಎಸ್.ಅಂಗಡಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯ ಕಾಪಾಡಿಕೊಂಡು, ಗುರುಗಳ ಮಾರ್ಗದರ್ಶನದಲ್ಲಿ ಶಿಕ್ಷಣ, ಸಂಸ್ಕಾರದಿಂದ ಉತ್ತಮ ನಾಗರಿಕರಾಗಬೇಕು. ಛಲದಿಂದ ಪ್ರಯತ್ನಶೀಲರಾದರೆ ಸಾಧಕರಾಗಲು ಸಾಧ್ಯ. ಪೂರ್ವಸಿದ್ಧತೆಯೊಂದಿಗೆ ಧೈರ್ಯದಿಂದ ಪರೀಕ್ಷೆ ಎದುರಿಸಿ ಪ್ರತಿಭಾನ್ವಿತರಾಗಿ ಸಂಸ್ಥೆ ಕೀರ್ತಿ ಹೆಚ್ಚಿಸುವಂತೆ ಕರೆ ನೀಡಿದರು.

ಪ್ರಾಚಾರ್ಯ ಎಂ.ಎ.ಪಾಟೀಲ, ಮುಖ್ಯಶಿಕ್ಷಕ ಜಿ.ಎಂ.ಬಿರಾದಾರ, ಶಿಕ್ಷಕಿ ಎಸ್.ಒ.ಅಂಗಡಿ, ವಿದ್ಯಾರ್ಥಿ ಪ್ರತಿನಿಽಗಳಾದ ಸ್ನೇಹಾ ತೇರದಾಳ, ದರ್ಶನ ನನ್ನಾಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net