ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ

CTD KANNADA....
Published on

ಚಿತ್ರದುರ್ಗ: ನಿರಂತರ ಪ್ರಯತ್ನವಿಲ್ಲದೆ ಸಾಧನೆಯ ಗುರಿ ತಲುಪಲಾಗದು. ದೃಢತೆಯಿದ್ದರೆ ಏನನ್ನಾದರೂ ಸಾಧಿಸಬಹುದೆಂದು ಪ್ರವಾಚಕ ಎನ್.ಜೆ. ಗುರುಪ್ರಸಾದ್ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ನಾಡಗೀತೆ, ರಾಷ್ಟ್ರಗೀತೆ, ರೈತಗೀತೆ ಪ್ರಾಯೋಗಿಕ ತರಬೇತಿ, ಕನ್ನಡ ಗೀತಗಾಯನ, ಯೋಗ ತರಬೇತಿ ಮತ್ತು ಕವಿಕಾವ್ಯ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭವಿಷ್ಯದ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಪ್ರಶಿಕ್ಷಣಾರ್ಥಿಗಳ ಮೇಲಿದೆ ಎಂದರು.
ಪ್ರವಾಚಕ ಎ. ಹನುಮಂತರಾಯ ಟಿ.ಎಸ್. ವೆಂಕಣ್ಣಯ್ಯ ಅವರ ಕಾವ್ಯ ಸಾಧನೆ ಪರಿಚಯಿಸಿದರು. ಉಪನ್ಯಾಸಕರಾದ ಡಿ. ನರಸಿಂಹಪ್ಪ, ಟಿ. ಗೋವಿಂದಪ್ಪ, ಬಿ.ಜಿ. ಹೇಮಲತಾ, ಎಸ್.ಜಿ. ಸರಸ್ವತಿ, ಬೋಧಕರಾದ ಇ. ರಘುನಾಥ, ಕೆ.ಬಿ. ಪುಷ್ಪಲತಾ, ಸವಿತಾ ಪೂಜಾರಿ ಇದ್ದರು.
ಯೋಗ ತರಬೇತುದಾರ ಎಂ.ಬಿ. ಮುರುಳಿ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ, ಸಂಸ್ಥೆ ನಿರ್ದೇಶಕಿ ಎಸ್.ಕೆ. ಸುನೀತಾ ತರಬೇತಿ ನೀಡಿದರು. ಮದಕರಿಪುರದ ಸ.ಹಿ.ಪ್ರಾ ಶಾಲೆ 3ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಸೈಯದ್‌ಅಯಾನ್ ಅವರನ್ನು ಗೌರವಿಸಲಾಯಿತು. ಪ್ರಶಿಕ್ಷಣಾರ್ಥಿಗಳಾದ ನಯನಾ, ಅಮೃತಾ ಪ್ರಾರ್ಥಿಸಿದರು. ಗೌತಮಿ, ಅಂಬಿಕಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net