

ಚಿಕ್ಕಮಗಳೂರು: ನಿರಂತರ ಪ್ರಯತ್ನ, ಹಠ, ಛಲ ಜೊತೆಗೆ ಆಶಾಭಾವ ಯಶಸ್ಸನ್ನು ತಂದು ಕೊಡುತ್ತದೆ ಎಂದು ಎಸ್‌ಟಿಜೆ ಕಾಲೇಜು ಪ್ರಾಚಾರ್ಯೆ ಪ್ರೊ.ಜೆ.ಕೆ.ಭಾರತಿ ತಿಳಿಸಿದರು.
ಎಸ್‌ಟಿಜೆ ಮಹಿಳಾ ಪದವಿ ಕಾಲೇಜಿನಲ್ಲಿ ೨೦೨೪-೨೫ನೆಯ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟಿçÃಯ ಸೇವಾ ಯೋಜನೆ ರೇಂರ‍್ಸ್ ಮತ್ತು ವೈಆರ್‌ಸಿ ಘಟಕಗಳ ಉದ್ಘಾಟನಾ ಸಮಾಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾನ್ಯರು ಸೋತ ಕೂಡಲೇ ಪ್ರಯತ್ನ ನಿಲ್ಲಿಸುತ್ತಾರೆ. ವಿಜೇತರು ಗೆಲ್ಲುವವರೆಗೂ ಸೋಲುತ್ತಲೇ ಇರುತ್ತಾರೆ. ಆಶಾಭಾವದ ನಿರಂತರ ಪ್ರಯತ್ನ ಯಶಸ್ಸನ್ನು ಕೊಡುತ್ತದೆ. ಬದ್ಧತೆ ಮತ್ತು ಕಠಿಣಶ್ರಮ ಜೀವನದ ನಿಜವಾದ ಪರೀಕ್ಷೆ ಎದುರಿಸಲು ಸಹಕಾರಿ. ದೃಢನಿರ್ಧಾರ, ಪೂರ್ಣ ತೊಡಗಿಸಿಕೊಳ್ಳುವಿಕೆ ಮತ್ತು ಪ್ರಯತ್ನಶೀಲತೆಯಿಂದ ಯಶಸ್ಸು ಲಭಿಸುತ್ತದೆ ಎಂದರು.
ಸಮಾಜಮುಖಿ ಆದಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ ಮತ್ತು ನೆನಪಿನಲ್ಲಿಟ್ಟುಕೊಳ್ಳುತ್ತದೆ. ಇನ್ನೊಬ್ಬರಿಗೆ ಸಹಾಯ, ಸಹಕಾರ ನೀಡುವ ಮನೋಭಾವ ನಮ್ಮದಾಗಬೇಕು. ಪ್ರತಿಭೆಯನ್ನು ಸರಿಯಾಗಿ ಗುರುತಿಸಿ ಪೋಷಿಸಿದರೆ ಸಮಾಜಕ್ಕೆ ಅವರಿಂದ ಹೆಚ್ಚಿನ ಸಹಾಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಆರೋಗ್ಯಪಾಲನೆಯ ಕಡೆಗೆ ವಿದ್ಯಾರ್ಥಿನಿಯರು ಹೆಚ್ಚಿನ ಆಸಕ್ತಿವಹಿಸಬೇಕು. ಯೋಗ, ಧ್ಯಾನ, ಪ್ರಾಣಾಯಾಮ ನಿತ್ಯ ಅನುಷ್ಠಾನಗೊಳಿಸಿದರೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನು ಹೊಂದಬಹುದು. ಪೌಷ್ಠಿಕ ಆಹಾರ ಸೇವನೆ, ನಿತ್ಯ ಹೆಚ್ಚು ನೀರು ಕುಡಿಯುವುದು, ವೈಯಕ್ತಿಕ ಸ್ವಚ್ಛತೆಯತ್ತ ಹೆಚ್ಚಿನ ಗಮನ ಕೊಡಬೇಕು ಎಂದರು.
ಎಸ್.ಟಿ.ಜೆ.ಕಾಲೇಜು ವಿದ್ಯಾರ್ಥಿನಿಯರಾದ ರಾಷ್ಟಿçÃಯ ಮಹಿಳಾ ಕಬ್ಬಡಿ ತಂಡದ ಸದಸ್ಯೆ ಜಿ.ಕೆ.ಅನೂಷಾ ಮತ್ತು ಕುವೆಂಪು ವಿ.ವಿ.ಮಹಿಳಾ ಕಬ್ಬಡಿ ತಂಡದ ನಾಯಕಿ ಈ.ಸಿಂಧೂ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಚಿ.ಸ.ಪ್ರಭುಲಿಂಗಶಾಸ್ತಿç , ಎಸ್‌ಟಿಜೆ ಪಿಯು ಕಾಲೇಜು ಪ್ರಾಚಾರ್ಯ ಸಂತೋಷಕುಮಾರ್, ಹಿರಿಯ ಉಪನ್ಯಾಸಕ ಎಂ.ಆರ್.ಚAದ್ರಶೇಖರ್, ವಿದ್ಯಾರ್ಥಿನಿಯರಾದ ಸಂಧ್ಯಾ, ಸೃಷ್ಟಿ, ಸಂಗೀತಾ ಉಪಸ್ಥಿತರಿದ್ದರು.