ನಿರಂತರ ನೀರು ಪೂರೈಸುವ ಪೈಪ್​ಲೈನ್ ದುರಸ್ತಿ

20MDG2
Published on

ಮುಂಡರಗಿ: ತಾಲೂಕಿನ ಕನಕರಾಯನ ಗುಡ್ಡದ ಬಳಿ ಒಡೆದಿದ್ದ ನಿರಂತರ ನೀರು ಪೂರೈಸುವ ಪೈಪ್ ಅನ್ನು ಭಾನುವಾರ ದುರಸ್ತಿಗೊಳಿಸಲಾಗಿದೆ.

ಹಮ್ಮಿಗಿಯಿಂದ ಗದಗಿಗೆ ನಿರಂತರ ಪೂರೈಸುವ ಕುಡಿಯುವ ನೀರು ಯೋಜನೆಯ ಪೈಪ್​ಲೈನ್ ಕನಕರಾಯನ ಗುಡ್ಡದ ಬಳಿ ಸೆ.13ರಂದು ಒಡೆದಿದ್ದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿತ್ತು. ಅಲ್ಲದೆ, ಪಕ್ಕದ ಜಮೀನಿನಲ್ಲಿ ನೀರು ಸಂಗ್ರಹವಾಗಿದ್ದರಿಂದ ಬೆಳೆ ಹಾನಿಯಾಗುವ ಹಂತ ತಲುಪಿತ್ತು. ಈ ಬಗ್ಗೆ ಶನಿವಾರ ವಿಜಯವಾಣಿಯಲ್ಲಿ ‘ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲು’ ಎಂಬ ಶೀರ್ಷಿಕೆಯಲ್ಲಿ ವಿಸõತ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಒಡೆದ ಪೈಪ್ ಅನ್ನು ದುರಸ್ತಿ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಹಮ್ಮಿಗಿ-ಗದಗ ನಿರಂತರ ಕುಡಿಯುವ ನೀರು ಯೋಜನೆ ಎಇಇ ಎಸ್.ಎ. ಬಾಜಣ್ಣವರ, ‘ಒಡೆದ ಪೈಪ್ ದುರಸ್ತಿಗೊಳಿಸುವ ಉದ್ದೇಶದಿಂದ ಗದಗಕ್ಕೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಆದರೆ, ಗದಗಿನ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಿರಲಿ ಎಂದು ಕಾಲುವೆಯ ಮೂಲಕ ನೀರನ್ನು ಗದಗಿನ ನದಿ ನೀರು ಶುದ್ಧೀಕರಣ ಘಟಕಕ್ಕೆ ಪೂರೈಸಲಾಗಿತ್ತು. ಶೀಘ್ರವೇ ಪೈಪ್ ಮೂಲಕ ನೀರು ಪೂರೈಸಲಾಗುತ್ತದೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net