

ಕಲಬುರಗಿ: ನಿರಂತವಾಗಿ ಸಂಗೀತ ಅಭ್ಯಾಸ ಮಾಡುವುದರಿಂದ ಸಾಧನೆ ಸಾಧ್ಯ ಎಂದು ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕ ವೆಂಕಟೇಶ ಆಲ್ಕೂಡ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಸಂಗೀತ ವಿಭಾಗದಿಂದ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಗೀತದಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಪದವಿಯಲ್ಲಿ ಸಂಗೀತ ಅಭ್ಯಾಸ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ವಚನಗಳು, ದಾಸರ ಪದಗಳು, ಹಿಂದೂಸ್ತಾನಿ ಸಂಗೀತದ ರಾಗಗಳ ವಿಶೇಷಗಳನ್ನು ತಿಳಿಸಿದರು.
ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಸಾಧನೆಗೆ ಹೆಚ್ಚು ಸಮಯ ಬೇಕು. ಸಾಧನೆ ಮಾಡಿದಾಗ ಮಾತ್ರ ಸಂಗೀತಗಾರನು ಶ್ರೇಷ್ಠ ಕಲಾವಿದನಾಗಿ ಬೆಳೆಯುತ್ತಾನೆ ಎಂದರು. ಸಂತೋಷಕುಮಾರ ಕಾಮಶೆಟ್ಟಿ, ವಿಭಾಗದ ಮುಖ್ಯಸ್ಥ ಡಾ.ಸೀಮಾ ಪಾಟೀಲ್ ಇತರರಿದ್ದರು. ವೀರಭದ್ರಯ್ಯ ಸ್ಥಾವರಮಠ ಸ್ವಾಗತಿಸಿ, ನಿರೂಪಣೆ ಮಾಡಿದರು. ಪೂಜಾ ಎಂ.ಎA.ಪ್ರಾಥಿಸಿದರು. ವೆಂಕಟೇಶ ಆಲ್ಕೂಡ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗಿತು