

ಗಂಗಾವತಿ:ಗುರಿ ತಲುಪಲು ಶ್ರದ್ಧೆ, ಅಧ್ಯಯನ ಮತ್ತು ಶಿಸ್ತು ಮುಖ್ಯವಾಗಿದ್ದು, ಕೌಶಲ ಗುಣಗಳನ್ನು ರೂಢಿಸಿಕೊಳ್ಳುವಂತೆ ಉದ್ಯಮಿ ಎನ್.ಆರ್.ಶ್ರೀನಿವಾಸ ಹೇಳಿದರು.
ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಬಿಎ ವಿಭಾಗದಿಂದ ಗುರುವಾರ ಆಯೋಜಿಸಿದ್ದ ಉನ್ನತಿ 2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಯ ವ್ಯರ್ಥಮಾಡದೇ ನಿರೀಕ್ಷಿತ ಗುರಿಯತ್ತ ಗಮನಹರಿಸಬೇಕಿದ್ದು, ಸಾಧನೆಗೆ ವಿದ್ಯಾರ್ಥಿ ಜೀವನ ಪ್ರಮುಖವಾಗಿದೆ. ಮಾರುಕಟ್ಟೆ ಸ್ಥಿತಿಗತಿ ಬಗ್ಗೆ ನಿತ್ಯ ಅಧ್ಯಯನ ಮಾಡಬೇಕು ಎಂದರು.
ಪ್ರಾಧ್ಯಾಪಕ ಡಾ.ಜಿ.ದೇವೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಉದ್ಯಮ ಮತ್ತು ಉದ್ಯೋಗದಲ್ಲಿ ನೈತಿಕತೆಯ ಶಿಸ್ತು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕಾಲೇಜಿನಲ್ಲಿ ಆಯೋಜಿಸಿದ್ದ ಉತ್ಕರ್ಷ ಮಾರುಕಟ್ಟೆ ಮೇಳ, ಸ್ಪರ್ಧಾ ರಸಪ್ರಶ್ನೆ ಕಾರ್ಯಕ್ರಮ ಮತ್ತು ವಿವಿಧ ಮ್ಯಾನೇಜ್ಮೆಂಟ್ ಮೇಳದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲೆ ಜಗದೇವಿ ಎಂ.ಕಲಶೆಟ್ಟಿ, ಪ್ರಾಧ್ಯಾಪಕರಾದ ಜಯಶ್ರೀಪಾಟೀಲ್, ಕೆ.ಎಂ.ಅನಿತಾ, ಅಕ್ಕಿ ಮಾರುತಿ, ಅಶ್ರ್, ವಿನಯಕುಮಾರ್ ಇತರರಿದ್ದರು.