ನಿರಂತರ ಅಧ್ಯಯನ ಸಾಧನೆಗೆ ಸಹಕಾರಿ

22..3
ನಿಪ್ಪಾಣಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿದರು. ರಾಜೇಂದ್ರ ಗುಂದೇಶಾ, ಜಯವಂತ ಭಾಟಲೆ, ಮಹಾದೇವಿ ನಾಯಿಕ, ಯಾಸ್ಮೀನ್ ಮುಲ್ಲಾ, ರಾಜೇಂದ್ರ ಗುಂದೇಶಾ ಇತರರಿದ್ದರು.
Published on

ನಿಪ್ಪಾಣಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಉನ್ನತ ಶಿಕ್ಷಣ ಕೊಡಿಸುವಲ್ಲಿ ಶ್ರಮಿಸುತ್ತಿರುವ ಪಾಲಕರು ಮತ್ತು ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.


ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಕ್ಷೇತ್ರ ಶಿಕ್ಷಣಾಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಕ್ರೀಡಾ ಸಾಮಗ್ರಿ ವಿತರಣೆ, ಉಚಿತ ಸಮವಸ್ತ್ರ ವಿತರಣೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಪ್ರೌಢಶಾಲೆಗಳಿಗೆ ಸ್ಮರಣಿಕೆ ಹಂಚಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಮಕ್ಕಳು ನಿರಂತರ ಅಧ್ಯಯನ ಕೈಗೊಂಡಲ್ಲಿ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅತಿಯಾದ ಮೂಬೈಲ್ ಗೀಳಿಗೆ ಒಳಗಾಗದೆ ಶಿಕ್ಷಣದ ಉಪಯೋಗಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ಶಿಕ್ಷಕರು ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಗತಿಗೆ ಶ್ರಮಿಸಬೇಕು ಎಂದರು.


ದೈಹಿಕ ಪರಿವೀಕ್ಷಕ ಎಸ್.ಬಿ.ಜೋಗಳೆ ಮಾತನಾಡಿದರು. ನಗರಸಭೆ ಮಾಜಿ ಅಧ್ಯಕ್ಷ ಜಯವಂತ ಭಾಟಲೆ, ಕ್ಷೇತ್ರ ಶಿಕ್ಷಣಾಕಾರಿ ಮಹಾದೇವಿ ನಾಯಿಕ, ಶಿಕ್ಷಕಿ ಯಾಸ್ಮಿನ್ ಮುಲ್ಲಾ, ರಾಜೇಂದ್ರ ಗುಂದೇಶಾ, ಅನೀಲ ಪೋಳ, ಅಜಿತಕುಮಾರ ಶಿಂತ್ರೆ, ಮಹಾದೇವ ಗೋಕಾರ, ಆದಂಅಲಿ ಪೀರಜಾದೆ, ಯಲ್ಲಪ್ಪ ಹಂಡಿ, ಭಾಸ್ಕರ ಸ್ವಾಮಿ, ಆರ್.ಬಿ.ಕಾಗೆ, ಜ್ಞಾನದೇವ ನಾಯಿಕ, ವಿಭಾವರಿ ಖಾಂಡಕೆ, ಯಲ್ಲಟ್ಟಿ ಇತರರಿದ್ದರು.
ನಿಪ್ಪಾಣಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿದರು. ರಾಜೇಂದ್ರ ಗುಂದೇಶಾ, ಜಯವಂತ ಭಾಟಲೆ, ಮಹಾದೇವಿ ನಾಯಿಕ, ಯಾಸ್ಮೀನ್ ಮುಲ್ಲಾ, ರಾಜೇಂದ್ರ ಗುಂದೇಶಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net