ನಿರಂತರ ಅಧ್ಯಯನ ಕೈಗೊಳ್ಳಬೇಕು

13CHIKODIGRAMEEN1
Published on

ಚಿಕ್ಕೋಡಿ ಗ್ರಾಮೀಣ: ವಿದ್ಯಾರ್ಥಿಗಳು ನಿರಂತರ ಅಧ್ಯಯನ ಕೈಗೊಳ್ಳುವ ಮೂಲಕ ಸಾಧನೆ ಮಾಡಿ, ತಂದೆ-ತಾಯಿ ಹಾಗೂ ಗುರುಗಳ ಕೀರ್ತಿ ಹೆಚ್ಚಿಸಬೇಕು ಎಂದು ಸದಲಗಾ ಗೀತಾಶ್ರಮದ ಡಾ.ಶ್ರದ್ಧಾನಂದ ಸ್ವಾಮೀಜಿ ಹೇಳಿದರು.

ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಗೀತಾಶ್ರಮದಲ್ಲಿ ಸತ್ಸಂಗ ಅಂಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಶ್ರೀಮಠದ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಗೀತಾಶ್ರಮದ ಡಾ. ಶ್ರದ್ಧಾನಂದ ಸ್ವಾಮೀಜಿಗೆ ಈಚೆಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಗಣ್ಯರಾದ ಶಿವಾನಂದ ಕಮತೆ ಮಾತನಾಡಿ, ಆಸ್ಟ್ರೇಲಿಯಾದ ಪರ್ತ ಮಹಾನಗರದಲ್ಲಿ ಜರುಗಿದ ದ್ವಿತೀಯ ಏಶಿಯಾ ಪೆಸಿಫಿಕ್ ಬಸವ ಜಯಂತಿ ಉತ್ಸವದಲ್ಲಿ ಡಾ. ಶ್ರದ್ಧಾನಂದ ಸ್ವಾಮೀಜಿ ಪಾಲ್ಗೊಂಡು ಬಸವತತ್ತ್ವ, ನಮ್ಮ ಸಂಸ್ಕೃತಿ, ಧರ್ಮದ ಶ್ರೇಷ್ಠತೆ ಕುರಿತು ತಿಳಿಸಿದರು ಎಂದರು.

ಡಾ. ಶ್ರದ್ಧಾನಂದ ಸ್ವಾಮೀಜಿ ಹಾಗೂ ವಿದ್ಯಾರ್ಥಿಗಳಾದ ದ್ರೌಪದಿ ನವಲೆ, ಕುಮಾರ ದಾನವಾಡೆ, ಅಮೂಲ್ಯ ನಾಯಿಕ, ಹರ್ಷಾ ಹಂಚನಾಳೆ ಅವರನ್ನು ಸನ್ಮಾನಿಸಲಾಯಿತು. ಮಹಾದೇವ ಕೊಲ್ಲಾಪುರೆ, ಮಾರುತಿ ಕುಂಬಾರ, ಶಿವಾನಂದ ಕಮತೆ, ಮಹಾದೇವ ಮಧಾಳೆ, ರಾಜು ಹಲಕಾಟೆ, ಸಚಿನ ಹಂಚನಾಳೆ, ಮಧುಕರ ಪರಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net