ನಿರಂಕಾರಿ ಟ್ರಸ್ಟ್ನಿಂದ ಸಮಾಜಮುಖಿ ಕೆಲಸ

klb6
ವಾಡಿಯಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ವೈದ್ಯ ಪುರುಷೋತ್ತಮ ಆರೋರ ಉದ್ಘಾಟಿಸಿದರು. ತುಕಾರಾಮ ಕೋಟ್, ಪಾಂಡುರAಗ ನಾಕರ್ಡೆ, ಅಂಕುಶ ನವಲೆ, ದಿಗಂಬರ ವಾಗ್ಮೊಡೆ, ಆದಿತ್ಯ ಚವ್ಹಾಣ ಇತರರಿದ್ದರು.
Published on

ವಾಡಿ: ಸಂತ ನಿರಂಕಾರಿ ಚಾರಿಟೇಬಲ್ ಟ್ರಸ್ಟ್ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ ಎಂದು ವೈದ್ಯ ಪುರುಷೋತ್ತಮ ಆರೋರ ಹೇಳಿದರು.

ಬಳಿರಾಮ ಚೌಕ್‌ನ ಸಂತ ಸೇವಾಲಾಲ್ ಮಂದಿರದಲ್ಲಿ ಸಂತ ನಿರಂಕಾರಿ ಚಾರಿಟೇಬಲ್ ಟ್ರಸ್ಟ್ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ದೆಹಲಿಯಲ್ಲಿ 1200 ಹಾಸಿಗೆ ಸಾಮರ್ಥ್ಯವುಳ್ಳ ಬೃಹತ್ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, 2025ರ ಮಾರ್ಚ್ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅಲ್ಲಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಅರೋಗ್ಯ ಸೇವೆ ನೀಡಲಾಗುವುದು ಎಂದು ತಿಳಿಸಿದರು.

ಅಪೌಷ್ಟಿಕ ಆಹಾರ ಸೇವನೆಯಿಂದಾಗಿ ಜನರಲ್ಲಿ ಅದರಲ್ಲೂ ಮಕ್ಕಳು, ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ತರಕಾರಿಯನ್ನು ಹೆಚ್ಚೆಚ್ಚು ಸೇವಿಸಬೇಕು. ಮೊಳಕೆ ಕಾಳುಗಳನ್ನು ತಿನ್ನಬೇಕು. ಜಂಕ್ ಫುಡ್‌ಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ವೈದ್ಯರಾದ ತುಕಾರಾಮ ಕೋಟ್, ಪಾಂಡುರAಗ ನಾಕರ್ಡೆ, ಅಂಕುಶ ನವಲೆ, ದಿಗಂಬರ ವಾಗ್ಮೊಡೆ, ಆದಿತ್ಯ ಚವ್ಹಾಣ್, ಡಾ. ಧನಂಜಯ ಮಾನೆ, ಅನಿತಾ ಪವಾರ್ ಅವರು ಆರೋಗ್ಯ ತಪಾಸಣೆ ನಡೆಸಿ, ಸೂಕ್ತ ಸಲಹೆ ನೀಡಿದರು.

ಪ್ರಮುಖರಾದ ಶಿವರಾಮ ಪವಾರ್, ಪ್ರಕಾಶ ಪವಾರ್, ರೂಪಸಿಂಗ್ ರಾಠೋಡ್, ಕರಣ ರಾಠೋಡ್, ರಮೇಶ ಕಾರಬಾರಿ, ತುಳಸಿರಾಮ ರಾಠೋಡ್, ಗೋವಿಂದ ಚವ್ಹಾಣ್, ರಾಮಚಂದ್ರ ರಾಠೋಡ್, ಮನೋಜ ರಾಯಚೂರು, ಗಿರಿಮಲ್ಲಪ್ಪ ಕಟ್ಟಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net