ನಿಯಮಿತ ಆಹಾರ ಸೇವನೆ ಮುಖ್ಯ

8
Published on

ಚನ್ನಮ್ಮನ ಕಿತ್ತೂರು: ಜೀವನದಲ್ಲಿ ಯಶಸ್ಸು ಕಾಣಲು ನಿಯಮಿತ ಆಹಾರ ಸೇವನೆ ಮತ್ತು ಮನಸ್ಸು ವಿನೋದದಿಂದ ಕೂಡಿರುವುದು ಬಹುಮುಖ್ಯ ಎಂದು ಶಿವೋಹಂ ಸ್ಪಿರಿಚವಲ್​ ಹಬ್​ ಸಿಇಒ ಡಾ.ಸ್ಫೂರ್ತಿ ಮಾಸ್ತಿಹೊಳಿ ಹೇಳಿದರು.

ಸ್ಥಳಿಯ ಕಿ.ನಾ.ವಿ.ವ.ಸಂದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ 49ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿಯಮಿತವಾಗಿ ಸರಿಯಾದ ಸಮಯಕ್ಕೆ ಆರೋಗ್ಯಕರ ಆಹಾರ ಸೇವಿಸಬೇಕು. ದೈಹಿಕ ಬೆಳವಣಿಗೆ ಜತೆಗೆ ಮಾನಸಿಕ ಬೆಳವಣಿಗೆ ಅವಶ್ಯ ಎಂದರು.

ಕಿ.ನಾ.ವಿ.ವ.ಸಂದ ಚೇರ್ಮನ್​ ಜಗದೀಶ ವಸದ ಅಧ್ಯತೆ ವಹಿಸಿ ಮಾತನಾಡಿದರು. ಪೊ.ಶ್ರೀಧರ ಶಾಸಿ, ಪೊ. ನಾಗನಗೌಡ ಬೈಲೂರ, ಪೊ.ಎಂ.ಎಸ್​.ಪಾಟೀಲ ಅವರನ್ನು ಸನ್ಮಾನಿಸಲಾಯಿತು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಿನಾವಿವ ಸಂದ ಉಪಾಧ್ಯ ಅರುಣಕುಮಾರ ಬಿಕ್ಕಣ್ಣವರ, ಆಡಳಿತ ಮಂಡಳಿ ನಿರ್ದೇಶಕರಾದ ಎನ್​.ವಿ.ತಡಕೋಡ, ಎಸ್​.ಎಸ್​.ವಳಸಂಗ, ಯು.ಡಿ.ಭಾರತಿ, ಜೆ.ಬಿ.ಟ್ನಟ್ಟಿ, ಎನ್​.ಎಸ್​.ರೇಮಠ, ಡಿ.ಎಲ್​.ಪಾಟೀಲ, ವಿ.ಆರ್​.ಪಾಟೀಲ, ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅತಾ ಮಾಟೊಳ್ಳಿ, ವಿದ್ಯಾರ್ಥಿನಿ ಪ್ರತಿನಿಧಿ ತೇಜಶ್ವಿನಿ ಮೆಟ್ಟಿನ, ಕ್ರೀಡಾ ಕಾರ್ಯದರ್ಶಿ ವೈಷ್ಣವಿ ದೇಗಾಂವಿ, ವಿದ್ಯಾರ್ಥಿ ಒಕ್ಕೂಟದ ಸಹ&ಕಾರ್ಯದರ್ಶಿ ಡಾ. ಸಂಗೀತಾ ತೋಲಗಿ ಇದ್ದರು. ಪ್ರಾಚಾರ್ಯ ಡಾ.ಜಿ.ಕೆ.ಭೂಮನಗೌಡರ ಸ್ವಾಗತಿಸಿದರು. ಪೊ.ಎಚ್​.ಕೆ.ನಾಗರಾಜ ವಂದಿಸಿದರು. ಪೊ. ಸಿ.ಎಂ.ಗರಗದ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net