ನಿಯಮಾನುಸಾರ ಪರಿಶೀಲಿಸಿ ಕ್ರಮ

10ydg04
Published on

ಯಾದಗಿರಿ: ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ವಿಂಗಡಣೆ ಸಂಬಂಧ ಸ್ವೀಕೃತಗೊಂಡ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಪಂಚಾಯರ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಕಾರಿ ಡಾ.ಸುಶೀಲಾ ಬಿ., ತಿಳಿಸಿದ್ದಾರೆ.

ಗುರುವಾರ ನಗರದ ಜಿಲ್ಲಾಕಾರಿ ಕಚೇರಿಯ ಸಭಾಂಗಣದಲ್ಲಿ ತಾಪಂ, ಜಿಪಂ ಸದಸ್ಯರ ಕ್ಷೇತ್ರಗಳ ಗಡಿಗಳ ವಿಂಗಡಣೆ ಕುರಿತಂತೆ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪದಾಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ರಾಜ್ಯ ಚುನಾವಣಾ ಆಯೋಗದ ಅನ್ವಯ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಮತಕ್ಷೇತ್ರಗಳ ವಿಂಗಡಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ತಾಪಂನ ಒಟ್ಟು 94 ಸದಸ್ಯರ ಕ್ಷೇತ್ರಗಳಿದ್ದರೆ, ಜಿಪಂಗೆ ಹಿಂದಿನ ಚುನಾವಣೆ ಸಮಯದಲ್ಲಿ 24 ಸ್ಥಾನಗಳಿದ್ದವು. ಅವು ಇದೀಗ ವಿಂಗಡಣೆಯಾಗಿ 28ಕ್ಕೆ ಏರಿಕೆಯಾಗಿವೆ ಎಂದು ವಿವರಿಸಿದರು.

ಸಭೆಯಲ್ಲಿ ಗುರುಮಠಕಲ್ ಕ್ಷೇತ್ರ ಹೊರತುಪಡಿಸಿ ಉಳಿದ ಮೂರು ಕ್ಷೇತ್ರಗಳಿಂದ ಆಕ್ಷೇಪಣೆಗಳು ಕೇಳಿ ಬರಲಿಲ್ಲ. ಹೀಗಾಗಿ ನಿಯಮಾನುಸಾರ ಮಾನದಂಡಗಳ ಅನ್ವಯ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಅಪರ ಜಿಲ್ಲಾಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಚುನಾವಣೆ ತಹಸಿಲ್ದಾರ ಸಂತೋಷರಾಣಿ, ಗುರುಮಠಕಲ್ ತಹಸಿಲ್ದಾರ ಮೊಹಮ್ಮದ್ ಮೊಹಶಿರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ, ಬಿಜೆಪಿಯ ಶಂಕರ್ ಸೋನಾರ್, ಜೆಡಿಎಸ್ನ ಶಾಂತಪ್ಪ ಜಾಧವ್, ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ದಾದೂ, ವಿಶ್ವನಾಥ ನೀಲಹಳ್ಳಿ, ಅಲ್ಲಾ ಪಟೇಲ್ ಪೊಲೀಸ್ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net