ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ

5 byd1
Published on

ಬ್ಯಾಡಗಿ: ಪಟ್ಟಣದಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘಿಸುತ್ತಿರುವ ವ್ಯಾಪಾರಸ್ಥರು, ಸಾರ್ವಜನಿಕರಿಗೆ ದಂಡ ವಿಧಿಸಲಾಗುತ್ತಿದೆ.

ಕರೊನಾ ತಡೆಗಟ್ಟುವಲ್ಲಿ ಸರ್ಕಾರ ಬಿಗಿಕ್ರಮ ಕೈಗೊಂಡು ಹಲವು ಮಾರ್ಗಸೂಚಿಗಳನ್ನು ನೀಡಿದೆ. ಮೇ 4 ರಿಂದ ಸಾರ್ವಜನಿಕರಿಗೆ ದಿನನಿತ್ಯ ವ್ಯವಹಾರ ನಡೆಸಲು ವಿನಾಯಿತಿ ನೀಡಲಾಗಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಆದರೂ, ಬಹುತೇಕರು ನಿಯಮ ಪಾಲಿಸದಿರುವುದು ಕಂಡುಬರುತ್ತಿದೆ.

ಪರಸ್ಪರ ಅಂತರ ಪಾಲಿಸದಿರುವುದು, ಮಾಸ್ಕ್ ಧರಿಸದೇ ತಿರುಗಾಡುವುದು ಕಂಡು ಬರುತ್ತಿದೆ. ಹೀಗಾಗಿ ಪುರಸಭೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ಸಿಬ್ಬಂದಿ ಪಟ್ಟಣದ ವಿವಿಧ ಅಂಗಡಿ ಮುಂಗಟ್ಟುಗಳಿಗೆ ತೆರಳಿ, ಪರಸ್ಪರ ಅಂತರ ಕಾಯ್ದುಕೊಳ್ಳಲು ಅಂಗಡಿಗಳ ಮುಂದೆ ಗುರುತು ಹಾಕಿ, ಸರದಿಯಲ್ಲಿ ನಿಲ್ಲಿಸಿ ವ್ಯವಹರಿಸುವಂತೆ ತಿಳಿಸಿದ್ದರೂ, ಬಹುತೇಕ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ನಿಯಮ ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ ತಪ್ಪಿತಸ್ಥರ ಕಡೆಯಿಂದ ದಂಡ ವಸೂಲಿ ಮಾಡಲಾಗುತ್ತಿದೆ.

ಕರೊನಾ ವೈರಸ್ ತಡೆಗಟ್ಟಲು ಒಂದೂವರೆ ತಿಂಗಳಿಂದ ಲಾಕ್​ಡೌನ್ ಮಾಡಲಾಗಿತ್ತು. ಆಗ ಬೆಳಗ್ಗೆ 6ರಿಂದ 11 ಗಂಟೆಯವರೆಗೆ ದಿನಸಿ ಖರೀದಿಸಲು ಅವಕಾಶ ನೀಡಿತ್ತು. ಈಗ ಸಾರ್ವಜನಿಕರಿಗೆ ನಿರ್ಬಂಧ ಸಡಿಲಿಸಿದ್ದು, ಕಡ್ಡಾಯವಾಗಿ ನಿಯಮ ಪಾಲಿಸಬೇಕು. ಮಾಸ್ಕ್ ಧರಿಸದ, ಪರಸ್ಪರ ಅಂತರ ಕಾಯ್ದುಕೊಳ್ಳದವರ ಮೇಲೆ ದಂಡ ವಿಧಿಸಲಾಗುತ್ತಿದೆ. ಮೇ 5ರಂದು 9760 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.| ವಿ.ಎಂ. ಪೂಜಾರ, ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net