ನಿಯಮ ಉಲ್ಲಂಘಿಸಿದ ವಾಹನ ವಶಕ್ಕೆ

9HLY-2
Published on

ಹಳಿಯಾಳ: ಪಟ್ಟಣದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಕಾರ್ವಿುಕರನ್ನು ಹಾಗೂ ಸಿಬ್ಬಂದಿಯನ್ನು ನಿಯಮ ಬಾಹಿರವಾಗಿ ತುಂಬಿಕೊಂಡು ತೆರಳುತ್ತಿದ್ದ ವಾಹನವನ್ನು ಶನಿವಾರ ಹಳಿಯಾಳ ಪೊಲೀಸರು ಜಪ್ತಿ ಮಾಡಿದ್ದಾರೆ.

ಕೋವಿಡ್-19 ನಿಯಮಾವಳಿಯಂತೆ ವಾಹನದಲ್ಲಿ ಅದರ ಸಾಮರ್ಥ್ಯಕ್ಕಿಂತ ಅರ್ಧದಷ್ಟು ಜನರನ್ನು ತೆಗೆದುಕೊಂಡು ಹೋಗಬೇಕೆಂದು ಸೂಚಿಸಲಾಗಿದೆ. ಆದರೆ, ಸಕ್ಕರೆ ಕಾರ್ಖಾನೆಯ ವಾಹನದಲ್ಲಿ 14 ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದರು. ತಾಲೂಕಾಡಳಿತದ ತಂಡ ಯಲ್ಲಾಪುರ ನಾಕಾ ಬಳಿ ಸಾಗುತ್ತಿದ್ದ ಟ್ರ್ಯಾಕ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಸಿಪಿಐ ಬಿ.ಎಸ್.ಲೋಕಾಪುರ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net