ನಿಯಂತ್ರಣದಲ್ಲಿದೆ ವೈರಲ್ ಜ್ವರ

03 KAMPLI 04
Published on

ಕಂಪ್ಲಿ: ಶಾಂತಿನಗರ ಗ್ರಾಮಸ್ಥರಲ್ಲಿ ವೈರಲ್ ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಡಿಎಚ್‌ಒ ಡಾ.ವೈ.ರಮೇಶಬಾಬು ಬುಧವಾರ ವೈದ್ಯಕೀಯ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದರು.

ವಾತಾವರಣದಲ್ಲಿನ ಏರುಪೇರಿನಿಂದ ವೈರಲ್ ಜ್ವರ ಕಾಣಿಸಿಕೊಂಡಿದ್ದು, ಇದೀಗ ನಿಯಂತ್ರಣದಲ್ಲಿದೆ. ಜನತೆ ಖಾಸಗಿ ಆಸ್ಪತ್ರೆಗಳಿಗೆ ತೆರಳದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಶಾಂತಿನಗರದಲ್ಲಿ ತಾತ್ಕಾಲಿಕ ತುರ್ತು ಚಿಕಿತ್ಸಾ ಕೇಂದ್ರ ಆರಂಭಿಸಿ ಔಷಧ, ಅ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮದಲ್ಲಿನ ಚರಂಡಿ ಸ್ವಚ್ಛಗೊಳಿಸಲಾಗಿದೆ. ಮನೆಮನೆಗೆ ತೆರಳಿ ಲಾರ್ವಾ ಸಮೀಕ್ಷೆ ಕೈಗೊಳ್ಳಲಾಗಿದೆ. ಜನರು ಕುದಿಸಿ ಆರಿಸಿದ ನೀರು, ಬಿಸಿ ಆಹಾರ ಸೇವಿಸುವುದರೊಂದಿಗೆ ಸ್ವಚ್ಛತೆ ಕಾಪಾಡಬೇಕೆಂದು ಡಿಎಚ್‌ಒ ಸಲಹೆ ನೀಡಿದರು.

ನೆಲ್ಲುಡಿ ಗ್ರಾಪಂ ಸದಸ್ಯ ಪ್ರಭಾಕರ, ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ರವೀಂದ್ರ ಕನಕೇರಿ, ಆಡಳಿತ ವೈದ್ಯಾಧಿಕಾರಿ ಡಾ.ಫಾರೂಖ್ ಅಹಮ್ಮದ್, ಪ್ರಸೂತಿ ತಜ್ಞ ಡಾ.ಭರತ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ಎನ್‌ಸಿಡಿ ಸಲಹೆಗಾರ ಡಾ.ಜಬೀನ್ ತಾಜ್, ಜಿಲ್ಲಾ ಕಾಲರ ನಿಯಂತ್ರಣ ತಂಡದ ಎಚ್‌ಐಒ ತಿಪ್ಪೇಸ್ವಾಮಿ, ಉಮಾಮಹೇಶ್ವರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ, ಎಚ್‌ಐಒ ಬಸವನಗೌಡ, ವಿಘ್ನೇಶ್ವರ, ಕೃಷ್ಣಮೂರ್ತಿ, ಚನ್ನಬವರಾಜ, ಪಿಎಚ್‌ಸಿಒ, ಗೀತಾ, ನಂದಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net