

ಲಿಂಗಸುಗೂರು: ವಿಶ್ವ ಏಡ್ಸ್ ದಿನಾಚರಣೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಪ್ರಯುಕ್ತ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಮುಖ್ಯವೈದ್ಯಾಧಿಕಾರಿ ರುದ್ರಗೌಡ ಪಾಟೀಲ್ ಸೋಮವಾರ ಚಾಲನೆ ನೀಡಿದರು.
ಅಸುರಕ್ಷಿತ ಲೈಂಗಿಕತೆ, ಸಂಸ್ಕರಿಸದ ಸೂಜಿ, ಸಿರಿಂಜ್ ಬಳಕೆ ಮತ್ತು ಮರು ಬಳಸುವ ಬ್ಲೇಡ್, ಅಸುರಕ್ಷಿತವಾಗಿ ರಕ್ತ ಪಡೆಯುವುದು, ಸೋಂಕಿತ ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡಬಹುದಾಗಿದೆ. ಈ ಪೈಕಿ ಅಸುರಕ್ಷಿತ ಲೈಂಗಿಕತೆಯ ಶೇ.95 ಪ್ರಕರಣಗಳಿದ್ದು, ನಿಯಂತ್ರಣಕ್ಕೆ ಜನರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದು ಹೇಳಿದರು. ಗಡಿಯಾರ ವೃತ್ತದಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವ ನಾಟಕ ಪ್ರದರ್ಶಿಸಲಾಯಿತು.