ನಿಮ್ಮ ಬಾಳಿನ ಶಿಲ್ಪಿ ನೀವೇ ಆಗಬೇಕು: ಸಿ.ಎನ್.ಮಂಜೇಗೌಡ

34
Published on

ಮೈಸೂರು: ನಮ್ಮ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಹೀಗಾಗಿ ಎಲ್ಲರೂ ಚೆನ್ನಾಗಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿಮ್ಮ ಬಾಳಿನ ಶಿಲ್ಪಿ ನೀವೇ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಸಲಹೆ ನೀಡಿದರು.
ನಗರದ ಅಗ್ರಹಾರದಲ್ಲಿರುವ ಶ್ರೀಕೃಷ್ಣ ರಾಜೇಂದ್ರ ಸಹಕಾರ ಬ್ಯಾಂಕ್‌ನಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಮಾತನಾಡಿದರು.
ಮನುಷ್ಯ ಈ ಭೂಮಿ ಮೇಲೆ ಹುಟ್ಟಿದ ಮೇಲೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕಾದರೆ ಅದು ವಿದ್ಯೆಯಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗಬೇಕಾದಾಗ ಬ್ಯಾಂಕ್‌ಗಳು ಸಹಾಯ ಮಾಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸಿದ್ಧಗಂಗಾ ಮಠ, ಸುತ್ತೂರು ಮಠದ ಕೊಡುಗೆ ಅಪಾರವಾಗಿದ್ದು. ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಆದರ್ಶವಾಗಿಟ್ಟುಕೊಂಡು ಓದಬೇಕು ಎಂದರು.
ಈ ಬ್ಯಾಂಕ್ ಮೈಸೂರು ನಗರ ಜಿಲ್ಲಾದ್ಯಂತ ಹೆಸರು ಮಾಡಿದೆ. ಈ ಬ್ಯಾಂಕಿನಲ್ಲಿ ಹಿರಿಯ ರಾಜಕಾರಣಿಗಳಾದ ರಾಜಶೇಖರಮೂರ್ತಿ, ಗುರುಪಾದಸ್ವಾಮಿ, ವೇದಾಂಗ ಹೆಮ್ಮಿಗೆಯಂತಹ ಗಣ್ಯರು ಅಧ್ಯಕ್ಷರಾಗಿದ್ದರು ಎಂದು ಸ್ಮರಿಸಿದರು.
ವಾಟಾಳು ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬ್ಯಾಂಕ್‌ನ ಅಧ್ಯಕ್ಷ ಪ್ರತಿಧ್ವನಿ ಪ್ರಸಾದ್, ಉಪಾಧ್ಯಕ್ಷ ಬಸವರಾಜು, ಬಸಪ್ಪ, ನಿರ್ದೇಶಕರಾದ ನಂ.ಸಿದ್ದಪ್ಪ, ಪಾರ್ಥಸಾರಥಿ, ಎಚ್.ಎನ್.ಸರ್ವಮಂಗಳಾ, ನವೀನ್‌ಕುಮಾರ್, ಶಂಕರ್‌ನಾರಾಯಣಶಾಸ್ತ್ರಿ, ನಾಗರಾಜ್, ನಂದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net