ನಿಮಯ ಉಲ್ಲಂಘಿಸಿ ನಮಾಜ್​ 8 ಜನರ ವಿರುದ್ಧ ಪ್ರಕರಣ

download
Published on

ಬಸವಕಲ್ಯಾಣ: ಲಾಕ್ಡೌನ್ ಆದೇಶ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ (ನಮಾಜ್) ಸಲ್ಲಿಸಿದ 8 ಜನರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ನಿಲ್ದಾಣ ಸಮೀಪದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ತಹಸೀಲ್ದಾರ್ ಸಾವಿತ್ರಿ ಸಲಗರ, ಪೌರಾಯುಕ್ತೆ ಮೀನಾಕುಮಾರಿ ಬೋರಾಳಕರ್, ಸಿಪಿಐ ಮಲ್ಲಿಕಾಜರ್ುನ ಯಾತನೂರ, ಪಿಎಸ್ಐ ಸುನೀಲಕುಮಾರ ನೇತೃತ್ವದ ತಂಡ ಭೇಟಿ ನೀಡಿದಾಗ ಸಾಮೂಹಿಕ ಪ್ರಾರ್ಥನೆ ನಡೆದಿರುವುದು ಕಂಡಿದೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಮಂದಿರ, ಮಸೀದಿ, ಚಚರ್್ಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧವಿದೆ. ಆದರೂ ಇಲ್ಲಿ 20ಕ್ಕೂ ಹೆಚ್ಚು ಜನ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು. ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಕೆಲವರು ಕಾಲ್ಕಿತ್ತಿದರೆ, ಉಳಿದರು ಅಧಿಕಾರಿಗಳ ಜತೆ ವಾದಕ್ಕಿಳಿದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net