ನಿಮಗೆ ಆಗಲ್ಲ ಅಂದರೆ ದನ ಕಾಯಲು ಹೋಗಿ! ಅಧಿಕಾರಿಗಳ ವಿರುದ್ಧ ಸಚಿವ ಸಿ.ಸಿ. ಪಾಟೀಲ ಗರಂ

C.C. PATIL.
Published on

ಗದಗ: ‘ಸಂತೆ ಹಿಂದೆ ದನ ಕಟ್ಟಿದಂತೆ ಅಧಿಕಾರಿಗಳು ಜನರ ಹಿಂದೆ ನಿಲ್ಲುವುದಲ್ಲ. ಬೆಳೆ ಹಾನಿ ಪರಿಶೀಲನೆ ಸಂದರ್ಭದಲ್ಲಿ ನನ್ನ ಜತೆಯಲ್ಲಿಯೇ ಇರಬೇಕು, ನಿಮಗೆ ಆಗಲ್ಲ ಅಂದರೆ ದನ ಕಾಯಲು ಹೋಗಿ‘!

ಇದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರು ಗದಗ ತಾಲೂಕಿನ ಹೊಂಬಳದಲ್ಲಿ ಮಳೆ ಹಾನಿ ಪರಿಶೀಲನೆ ಸಮಯದಲ್ಲಿ ಕೃಷಿ ಅಧಿಕಾರಿಗಳು ಇಲ್ಲದ್ದನ್ನು ಕಂಡು ಗರಂ ಆಗಿ ತರಾಟೆಗೆ ತೆಗೆದುಕೊಂಡ ಪರಿ.

ಗಂಭೀರ ಸಮಸ್ಯೆ ಎದುರಾದ ಸಂದರ್ಭದಲ್ಲಿ ಅಧಿಕಾರಿಗಳು ಮುಂದೆ ನಿಂತುಕೊಂಡು ಪರಿಸ್ಥಿತಿಯ ವಾಸ್ತವಾಂಶ ವಿವರಿಸಬೇಕು. ಜನರ ನೋವು ಆಲಿಸಬೇಕು, ಅರಿತುಕೊಳ್ಳಬೇಕು. ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜಂಟಿ ಕೃಷಿ ಅಧಿಕಾರಿ ಜಿಯಾವುಲ್ಲಾ ಮತ್ತಿತರ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ನಂತರ ಕೋಪವನ್ನು ನಿಯಂತ್ರಿಸಿಕೊಂಡ ಸಚಿವರು ಪರಿಶೀಲನೆಯನ್ನು ಮುಂದುವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net