ನಿಪ್ಪಾಣಿಯಲ್ಲಿ ತ್ರಿವರ್ಣ ಧ್ವಜ ರ‍್ಯಾಲಿ

16npn3
Published on

ನಿಪ್ಪಾಣಿ: ನಗರದಲ್ಲಿ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಬಿಜೆಪಿ ಘಟಕದಿಂದ ಈಚೆಗೆ ಹಮ್ಮಿಕೊಂಡಿದ್ದ ತ್ರಿವರ್ಣ ಧ್ವಜ ರ‍್ಯಾಲಿಗೆ ಶಾಸಕಿ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಭಾರತ್ ಮಾತಾ ಕಿ ಜೈ, ಜೈ ಜವಾನ್ ಜೈ ಕಿಸಾನ್ ಮುಂತಾದ ಘೋಷಣೆ ಕೂಗಲಾಯಿತು. ಮುರಗೋಡ ರಸ್ತೆ, ಧರ್ಮವೀರ್ ಸಂಭಾಜಿರಾಜೆ ಚೌಕ್, ಚಿಕ್ಕೋಡಿ ರಸ್ತೆ, ಬಸವ ವೃತ್ತ, ಮಹಾದೇವಗಲ್ಲಿ, ಕೋಠಿವಾಲೆ ಕಾರ್ನರ್, ಚನ್ನಮ್ಮ ವೃತ್ತ, ಅಶೋಕನಗರ, ಹಳೇ ಪಿ.ಬಿ. ರಸ್ತೆ, ಪುರಸಭೆ, ರಾಮಮಂದಿರ, ಬೆಳಗಾವಿ ನಾಕಾ ಮಾರ್ಗದಿಂದ ಹುತಾತ್ಮರ ಸ್ಮಾರಕದವರೆಗೆ ರ‍್ಯಾಲಿ ಜರುಗಿತು. ರ‍್ಯಾಲಿಯಲ್ಲಿ ನಾಗರಿಕರು ಮತ್ತು ವಿದ್ಯಾರ್ಥಿಗಳು ತ್ರಿವರ್ಣ ಧ್ವಜ, ಕ್ಯಾಪ್ ಧರಿಸಿದ್ದರು.

ನಗರಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ, ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಜಯವಂತ ಭಾಟಲೆ, ಸುನೀಲ ಪಾಟೀಲ, ಮಹಾಲಿಂಗೇಶ ಕೋಠಿವಾಲೆ, ರಾಜು ಗುಂದೇಶಾ, ದೀಪಕ ಮಾನೆ, ಸೂರಜ ಖವರೆ, ಅಭಿನಂದನ ಮುದಕುಡೆ, ಬಂಡಾ ಘೋರ್ಪಡೆ, ಸಾಗರ ಮಿರಜೆ, ವಿಕಾಸ ವಾಸುದೇವ, ರವೀಂದ್ರ ಇಂಗವಲೆ, ಪ್ರೇಮಲಾಲ ಪೋಳ, ವಿಜಯ ಟವಳೆ, ದೀಪಕ ಪಾಟೀಲ, ಯೋಗಿತಾ ಘೋರ್ಪಡೆ, ಸುಜಾತಾ ಕದಂ, ಆಶಾ ಟವಳೆ, ಅರುಣಾ ಮುದಕುಡೆ, ಜೀಜಾಬಾಯಿ ರಾವುತ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net