ನಿಪ್ಪಾಣಿಯಲ್ಲಿ ಏಕಾದಶಿ ಸಂಭ್ರಮ

6Npn2
Published on

ನಿಪ್ಪಾಣಿ: ದೇವಶಯನಿ ಏಕಾದಶಿ ಅಂಗವಾಗಿ ಸ್ಥಳೀಯ ಪುರಾತನ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಬೆಳಗ್ಗೆ ಮಹಾಕಾಕಡ ಆರತಿ ನಡೆಯಿತು. ಬಳಿಕ ದಾದಾರಾಜೆ ದೇಸಾಯಿ (ನಿಪ್ಪಾಣಕರ ಸರ್ಕಾರ), ಸಾಹಿಲ್ ಶಹಾ ಮತ್ತು ಅಶೋಕ ರಾವುತ ದಂಪತಿಯಿಂದ ಮೂರ್ತಿಗೆ ಅಭಿಷೇಕ ಪೂಜೆ, ಮಹಾಆರತಿ, ಪಲ್ಲಕ್ಕಿ ಮತ್ತು ದಿಂಡಿ ಪ್ರದಕ್ಷಿಣೆ ಅದ್ದೂರಿಯಾಗಿ ನೆರವೇರಿತು.

ದಿನವಿಡಿ ವಿವಿಧ ಭಜನಾ ಮಂಡಳಿಗಳು ಭಜನೆ ಕಾರ್ಯಕ್ರಮ ಸಾದರಪಡಿಸಿದವು. ಸಂಜೆ ಹರಿಜಾಗರ ಕಾರ್ಯಕ್ರಮ ಜರುಗಿತು. ವಿವಿಧ ಗ್ರಾಮಗಳ ಜನರು ಸರದಿಯಲ್ಲಿ ನಿಂತು ವಿಠ್ಠಲ-ರುಕ್ಮಿಣಿ ದರ್ಶನ ಪಡೆದು ಪ್ರಸಾದ ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net