ಚಾಮರಾಜನಗರ: ಚಿಂದಿ ಆಯುತ್ತಲೇ ಬದುಕು ನೂಕುತ್ತಿದ್ದ ವ್ಯಕ್ತಿಯೊಬ್ಬ ನಿತ್ರಾಣಗೊಂಡು ಶುಕ್ರವಾರ ಅಸುನೀಗಿದ್ದಾರೆ. ತಾಲೂಕಿನ ಅಮಚವಾಡಿ ಗ್ರಾಮದ ನಿವಾಸಿ ಸಿದ್ಧಿ ಸೋಮಣ್ಣ(60) ಮೃತಪಟ್ಟ ದುರ್ದೈವಿ.
ಈತ ಹಲವಾರು ಕಡೆಗಳಲ್ಲಿ ಚಿಂದಿ ಆಯುವುದನ್ನೇ ಕೆಲಸ ಮಾಡಿಕೊಂಡಿದ್ದನು. ಶುಕ್ರವಾರ ಬದನಗುಪ್ಪೆ-ಕೆಲ್ಲಬಂಳ್ಳಿ ಕೈಗಾರಿಕಾ ಪ್ರದೇಶದ ಸುತ್ತಮುತ್ತ ಚಿಂದಿ ಆಯುತ್ತಿದ್ದನು. ಈ ವೇಳೆ ಮದ್ಯಪಾನ ಮಾಡಿದ್ದು, ಸೂಕ್ತ ಸಮಯಕ್ಕೆ ಆಹಾರ ಸೇವಿಸದ ಪರಿಣಾಮವಾಗಿ ಪಣ್ಯದಹುಡಿ ಗ್ರಾಮದ ಸಮೀಪ ನಿತ್ರಾಣಗೊಂಡು ಮೃತಪಟ್ಟಿದ್ದಾರೆ.
ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ದೇಹವನ್ನು ಶವ ಪರೀಕ್ಷೆಗಾಗಿ ಸಿಮ್ಸ್ ಆಸ್ಪತ್ರೆಗೆ ರವಾನಿಸಿದರು. ಬಳಿಕ ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಯಿತು.