ನಿತ್ಯದ ವ್ಯವಹಾರಕ್ಕೆ ಗಣಿತ ಮುಖ್ಯ

bkt-22-2
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಾ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರೌಢಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಜಿ.ಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ ಉದ್ಘಾಟಿಸಿದರು. ಜಿ.ಪಂ ಮುಖ್ಯ ಯೋಜನಾಽಕಾರಿ ಎನ್.ಕೆ.ನಿರ್ಮಲಾ, ಜಿ.ಪಂ ಯೋಜನಾ ನಿರ್ದೇಶಕ ಬಿ.ಎಸ್.ಮುಂಡರಗಿ, ಮುಖ್ಯ ಲೆಕ್ಕಾಽಕಾರಿ ಜಿ.ಎಂ.ಉಕ್ಕಲಿ, ಶಿಕ್ಷಣ ಇಲಾಖೆಯ ಎಚ್.ಬಿ.ಹೆಳವರ ಇತರರು ಇದ್ದರು.
Published on

ಬಾಗಲಕೋಟೆ: ದಿನ ನಿತ್ಯದ ವ್ಯವಹಾರದಲ್ಲಿ ಗಣಿತ ಮುಖ್ಯವಾಗಿದೆ. ಒಬ್ಬ ವ್ಯಕ್ತಿಯ ಹುಟ್ಟಿನಿಂದ ಸಾಯುವವರೆಗೂ ಲೆಕ್ಕ ಹಾಕಬೇಕಾಗುತ್ತದೆ ಎಂದು ಜಿ.ಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ ಹೇಳಿದರು.
ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಾ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರೌಢಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟಿದಾಗ ಹುಟ್ಟಿದ ದಿನ, ತಾರೀಖು ಮೂಲಕ ಹೇಳಲಾಗುತ್ತಿದೆ. ಬೆಳೆಯುತ್ತಲೆ ವರ್ಷಗಳನ್ನು ಸಹ ಲೆಕ್ಕ ಹಾಕಲಾಗುತ್ತದೆ. ಜೀವನದ ಪ್ರತಿಯೊಂದು ಹಂತದಲ್ಲಿಯೂ ಲೆಕ್ಕ ಹಾಕಲಾಗುತ್ತಿದೆ. ಯಾವ ಭಾಷೆಯಾಗಿರಲಿ, ವೈಜ್ಞಾನಿಕವಾಗಿ ಹಾಗೂ ಯಾವುದೇ ವಿಷಯದಲ್ಲಿ ಗಣಿತ ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಯೋಜನಾಧಿಕಾರಿ ಎನ್.ಕೆ.ನಿರ್ಮಲಾ, ಜಿ.ಪಂ ಯೋಜನಾ ನಿರ್ದೇಶಕ ಬಿ.ಎಸ್.ಮುಂಡರಗಿ, ಮುಖ್ಯ ಲೆಕ್ಕಾಧಿಕಾರಿ ಜಿ.ಎಂ.ಉಕ್ಕಲಿ, ಶಿಕ್ಷಣ ಇಲಾಖೆಯ ಎಚ್.ಬಿ.ಹೆಳವರ, ಮೌಲ್ಯಮಾಪಕರಾಗಿ ಆಗಲಿಸಿದ್ದ ಅರವಿಂದ ಸಿ, ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಜಿಲ್ಲಾ ನೋಡಲ್ ಅಽಕಾರಿ ಚಂದ್ರಶೇಖರ ಗುಂಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಾಕ್ಸ್ . . .
ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರು
ಪ್ರಥಮ ಬಹುಮಾನ ಆಲಿಯಾ ಕೌಸರ, ದ್ವಿತೀಯ ಬಹುಮಾನ ಗಾಯತ್ರಿ ಮೌನೇಶ ಬಡಿಗೇರ, ತೃತೀಯ ಬಹುಮಾನ ಗಂಗಮ್ಮ ಯಮನಪ್ಪಗೌಡ ಗೌಡರ ಹಾಗೂ ಸಮಾಧಾನಕರ ಬಹುಮಾನ ಸಂಕಲ್ಪ ಹಿರೇಮಠ, ಮಂಜುನಾಥ ಹಡಪದ, ಇಂದುಮತಿ ಶಿಂಧೆ, ಮಲ್ಲು ಬೆಳಗಲ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net