ಯಾದಗಿರಿ: ನಂಗೆ ಜೀವನ ನಡೆಸಲು ಆರ್ಥಿಕ ತೊಂದರೆಯಾಗಿದೆ. ಹಾಲು, ತರಕಾರಿ, ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದೆ ಹೀಗಾಗಿ ಪ್ರತಿ ತಿಂಗಳಿಗೆ 15 ಸಾವಿರ ಕೊಡಿ…
ಹೀಗೆಂದು ನಗರಸಭೆ ಪೌರಾಯುಕ್ತರಿಗೆ ಅನಾಮಧೇಯ ಪತ್ರ ಬಂದಿದ್ದು, ಇದನ್ನು ಕಂಡ ಕಮಿಷನರ್ ಶಾಕ್ ಆಗಿದ್ದಾರೆ. ಹೌದು, ಯಾದಗಿರಿ ನಗರಸಭೆಗೆ ಅನಾಧೇಯನೊಬ್ಬ ಪತ್ರ ಬರೆದು, ರಾಜ್ಯ ಸರ್ಕಾರ ಘೋಷಣೆ ಮಾಡಿರುವ 5 ಗ್ಯಾರಂಟಿಗಳಿಂದ ಏನೇನು ಲಾಭವಿಲ್ಲ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.
ತರಕಾರಿ, ಹಾಲು ಸೇರಿ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿದೆ. ಹೀಗಾಗಿ ಪ್ರತಿ ತಿಂಗಳು 15 ಸಾವಿರ ರೂ.ನೀಡುವಂತೆ ಬರೆದ ಪತ್ರ ಕಂಡು ಸಿಬ್ಬಂದಿಗಳು ದಂಗಾಗಿದ್ದಾರೆ. ಈ ಪತ್ರ ಎಲ್ಲಿಂದ ಬಂದಿದೆ ಎಂದು ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವಂತಾಗಿದೆ.