

ಚಿತ್ರದುರ್ಗ:ಮುರುಘಾ ಮಠದ ವತಿಯಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ ಹಿನ್ನೆಲೆಯಲ್ಲಿ ಜು.31ರ ಸಂಜೆ 5 ಗಂಟೆಗೆ ಮಠದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಹೊಳಲ್ಕೆರೆ ಒಂಟಿಕಂಬದ ಮುರುಘಾ ಮಠದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸ್ಮರಣೋತ್ಸವ, 17ರಿಂದ ಮುರುಘಾಮಠದ ಕರ್ತೃಗದ್ದುಗೆಗೆ ನಿತ್ಯವಚನಾಭಿಷೇಕ, ಶ್ರಾವಣ ಮಾಸದ ಚಿಂತನೆ ‘ನಿತ್ಯಕಲ್ಯಾಣ’ ಮತ್ತಿತರ ಕಾರ‌್ಯಕ್ರಮಗಳ ಆಯೋಜನೆ ಕುರಿತಂತೆ ಚರ್ಚಿಸಲಾಗುವುದು.
ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿ ಸಲಹೆ ನೀಡುವಂತೆ ಮಠದ ಪ್ರಕಟಣೆ ಕೋರಿದೆ.
(ಬಸವಪ್ರಭು ಸ್ವಾಮೀಜಿ)