ನಿತ್ಯ ವಿದ್ಯಾರ್ಥಿಯೇ ಅತ್ಯುತ್ತಮ ಶಿಕ್ಷಕ

Beladingalu
Published on

ಚಿತ್ರದುರ್ಗ: ಪದವಿ ಪಡೆದರೆ ಸಾಲದು. ಶಿಕ್ಷಣದ ಜೊತೆ ಕೌಶಲವಿದ್ದರೆ, ಬದುಕಿನಲ್ಲಿ ಯಶಸ್ಸು ಕಂಡುಕೊಳ್ಳಬಹುದು. ನಿತ್ಯ ವಿದ್ಯಾರ್ಥಿಯಾದವರೆ, ಅತ್ಯುತ್ತಮ ಶಿಕ್ಷಕನಾಗಲು ಸಾಧ್ಯ ಎಂದು ಸಾಹಿತಿ ಪ್ರೊ.ಎಚ್.ಎ.ಭಿಕ್ಷಾವರ್ತಿಮಠ್ ಸಲಹೆ ನೀಡಿದರು.

ದಾವಣಗೆರೆ ವಿವಿ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹತ್ತು ಬೆಳದಿಂಗಳ ಸಮಾರೋಪದಲ್ಲಿ ಮಾತನಾಡಿದರು.

ಪದವಿಧರರೆಲ್ಲ ಪ್ರಜ್ಞಾವಂತರಲ್ಲ. ಜನಪ್ರತಿನಿಧಿಗಳೆಲ್ಲ ಜನಸೇವಕರಲ್ಲ. ಪುಸ್ತಕ ಹಿಡಿದವರೆಲ್ಲ ಅಧ್ಯಾಪಕರಲ್ಲ. ಆದ್ದರಿಂದ ಶಿಕ್ಷಣಕ್ಕಿಂತ ಬದುಕಿನ ಪರೀಕ್ಷೆಯಲ್ಲಿ ಫೇಲಾಗಬಾರದು. ಮನುಷ್ಯನಿಗೆ ಒಂದಿಲ್ಲೊಂದು ರೀತಿ ಸಮಸ್ಯೆಗಳು ಸಹಜ. ಹೊಸ-ಹೊಸ ಅನುಭವ ಉತ್ತಮ ಪಾಠ ಕಲಿಸುತ್ತದೆ ಎಂದರು.

ವಿದ್ಯಾರ್ಥಿಗಳು ನಿಮ್ಮ ನಡೆ-ನುಡಿ ಗಮನಿಸುತ್ತಾರೆ. ಆದ್ದರಿಂದ ಶಿಕ್ಷಕರಾಗ ಬಯಸುವವರ ವರ್ತನೆ ಕನ್ನಡಿಯಂತಿರಬೇಕು. ಪಠ್ಯದ ಜತೆಗೆ ವಿವೇಕ, ಬುದ್ಧಿವಂತಿಕೆ, ಸಾಹಿತ್ಯ ಬದುಕಿಗೆ ನೆರವಾಗುತ್ತದೆ ಎಂದು ಸಲಹೆ ನೀಡಿದರು.

ರಾಜ್ಯ ಮುಕ್ತ ವಿವಿ ಮೈಸೂರಿನ ಆಡಳಿತ ವಿಭಾಗದ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್ ಮಾತನಾಡಿ, ಬಿಇಡಿ ಪೂರೈಸಿದ ನಂತರ ಸದೃಢ ಸಮಾಜ ನಿರ್ಮಿಸುವ, ಉತ್ತಮ ಪ್ರಜೆಗಳನ್ನು ರೂಪಿಸುವ ಹೊಣೆಗಾರಿಕೆ ನಿಮ್ಮ ಮೇಲಿದ್ದು, ದೇಶಕ್ಕೆ ಕೊಡುಗೆ ನೀಡಿ ಎಂದು ಕಿವಿಮಾತು ಹೇಳಿದರು.

ಶಿವಲಿಂಗಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್, ಪ್ರಾಚಾರ್ಯೆ ಪ್ರೊ.ಎಂ.ಆರ್.ಜಯಲಕ್ಷ್ಮೀ, ಉಪ ಪ್ರಾಚಾರ್ಯ ಪ್ರೊ.ಎಚ್.ಎನ್.ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net