ನಿತ್ಯ ದುಡಿಯುವವರಿಗೆ ಲಾಕ್ಡೌನ್ ಬರೆ

1104Klb32
Published on


ವಾದಿರಾಜ ವ್ಯಾಸಮುದ್ರ ಕಲಬುರಗಿ
ಕರೊನಾಕ್ಕೆ ಮಟ್ಟ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಲಾಕ್ಡೌನ್ ಅವಧಿಯನ್ನು ಇನ್ನೆರಡು ವಾರ ವಿಸ್ತರಿಸಿದೆ. ಜನಾರೋಗ್ಯ ದೃಷ್ಟಿಯಿಂದ ಒಳ್ಳೆಯ ನಿರ್ಧಾರವಾಗಿರುವ ಇದು ನಿತ್ಯ ದುಡಿಯುವವರಿಗೆ ಒಂದು ರೀತಿ ಬರೆ ಹಾಕಿದಂತಾಗಿದೆ. ಇಂಥವರಿಗೆ ಸರ್ಕಾರದ ನೆರವಿನ ಹಸ್ತ ಅಗತ್ಯವಿದೆ.
ದೇಶಾದ್ಯಂತ ಜಾರಿಗೆ ಮುನ್ನವೇ ಕರೊನಾ ಜಿಲ್ಲೆಯಲ್ಲಿ ಒಂದು ಸಾವು ಆಗಿತ್ತು. ಅಂತೆಯೇ ಜಿಲ್ಲಾಡಳಿತ ತಕ್ಷಣವೇ ನಿಷೇಧಾಜ್ಞೆ ಮತ್ತು ಲಾಕ್ಡೌನ್ ಹೇರಿದ್ದರಿಂದ ಕೆಲ ವರ್ಗದವರ ಒಂದ್ಹೊತ್ತಿನ ಊಟಕ್ಕೂ ಗತಿ ಇಲ್ಲವಾಗಿದೆ. ನಾನಾ ಸಂಘ-ಸಂಸ್ಥೆಗಳು ಇಂಥವರ ನೆರವಿಗೆ ಮುಂದಾಗಿವೆಯಾದರೂ ಸರ್ಕಾರದಿಂದಲೂ ಅರ್ಹರಿಗೆ ಆಹಾರಧಾನ್ಯ ಮುಟ್ಟಿಸುವ ಕೆಲಸ ಪರಿಣಾಮಕಾರಿ ನಡೆಯದಿರುವುದು ಸಮಸ್ಯೆ ಸೃಷ್ಟಿಸಿದೆ.
11 ಪಾಸಿಟಿವ್ ಕೇಸ್ ಪತ್ತೆಯಾದ ಜಿಲ್ಲೆಯಲ್ಲಿ ಇದ್ದ ಸೀಲ್ಡೌನ್ ವದಂತಿ ಸಧ್ಯಕ್ಕಿಲ್ಲ. ಆದರೆ ಪೊಲೀಸರು ಕಂಟೇನ್ಮೆಂಟ್ ಝೋನ್ ಸೇರಿ ಕೆಲ ಪ್ರದೇಶಗಳನ್ನು ಸಂಪೂರ್ಣ ಬಂದ್ ಮಾಡಿ ಸೀಲ್ಡೌನ್ ಮಾದರಿ ನಿಯಮ ಜಾರಿಗೆ ತಂದೇ ಬಿಟ್ಟಿದ್ದಾರೆ. ಕಂಟೇನ್ಮೆಂಟ್ ಝೋನ್ನಲ್ಲಿ ಜನಸಂಚಾರ ಸ್ಥಗಿತಗೊಳಿಸುವ ಅನಿವಾರ್ಯವಿತ್ತು.
ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡುವವರ ವಿರುದ್ಧ ಕೇಸ್ ದಾಖಲಿಸಿ ಜೈಲಿಗೆ ಅಟ್ಟಿ ಎಂಬ ಡಿಸಿಎಂ ಗೋವಿಂದ ಕಾರಜೋಳ ಫರ್ಮಾನು ಪೊಲೀಸಗೆ ಮತ್ತಷ್ಟು ಬಲ ತಂದುಕೊಟ್ಟಿದೆ. ಅನಗತ್ಯ ಮತ್ತು ಅಗತ್ಯ ಕೆಲಸಗಳಿಗೆ ಓಡಾಡುವವರು ಯಾರು ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಂಡರೆ ಒಳ್ಳೆಯದು. ಕೈಯಲ್ಲಿ ಲಾಠಿ ಇದೆ ಎಂದ ಮಾತ್ರಕ್ಕೆ ಎಲ್ಲರೊಂದಿಗೂ ಒಂದೇ ರೀತಿ ವರ್ತಿಸಿದರೆ ಸಾಮಾನ್ಯ ಜನಕ್ಕೆ ಕಷ್ಟ ತಪ್ಪಿದ್ದಲ್ಲ.
ಕರೊನಾ ತಡೆಗೆ ಲಾಕ್ಡೌನ್ ಮಾಡಿರುವ ಸರ್ಕಾರ ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಸಭೆಗೆ ಹೋಗಿ ಬಂದವರಲ್ಲಿ ಇನ್ನೂ ಅನೇಕರ ಪತ್ತೆ ಕಾರ್ಯ ನಡೆಸುತ್ತಲೇ ಇದೆ. ಇವರು ಸಿಗುವವರೆಗೆ ಜನರಲ್ಲಿ ಮನೆ ಮಾಡಿರುವ ಆತಂಕ ದೂರವಾಗಲ್ಲ. ವಿಚಿತ್ರವೆಂದರೆ, ಕರೊನಾ ಸೋಂಕು ದೃಢಪಟ್ಟ ಪ್ರಕರಣಗಳನ್ನು ಅವಲೋಕಿಸಿದರೆ ಇವರೆಲ್ಲ ತಬ್ಲಿಘಿ ಸಭೆಗೆ ಹೋದವರ ಜತೆ ನಿಕಟ ಸಂಪರ್ಕ ಹೊಂದಿದವರೇ ಎಂಬುದು ಭಯವನ್ನು ಇಮ್ಮಡಿಗೊಳಿಸಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ಆಹಾರ ಧಾನ್ಯ ಪೂರೈಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಎಲ್ಲ ಪಡಿತರ ಅಂಗಡಿಗಳಿಗೆ ಸೂಚಿಸಿದೆ. ಆದರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧೀನದ ನ್ಯಾಯಬೆಲೆ ಅಂಗಡಿಗಳವರು ಎಷ್ಟು ಸಮರ್ಪಕವಾಗಿ ಆಹಾರ ಧಾನ್ಯ ಪೂರೈಸುತ್ತಿದ್ದಾರೆ ಎಂಬುದು ಪ್ರಶ್ನಾರ್ಹ.
ನ್ಯಾಯಬೆಲೆ ಅಂಗಡಿಯವರು ತಮ್ಮ ಅಂಗಡಿಗಳನ್ನು ತೆರೆಯುವುದೇ ಇಲ್ಲ. ಇನ್ನು ಅಂಗಡಿಗಳಿಗೆ ಬಂದರೂ ಸರ್ವರ್ ಸಮಸ್ಯೆಯಿಂದ ಒಟಿಪಿ ಬರದೆ ಬಡ ಜನ ಬಿಸಿಲಲ್ಲೇ ಕಾಯುತ್ತ ಕುಳಿತುಕೊಳ್ಳುವಂತಾಗಿದೆ. ಈ ಬಗ್ಗೆ ಯಾರ ಗಮನಕ್ಕೆ ತರಬೇಕು ಎಂದು ಗೊತ್ತಾಗದೆ ಬಡವರು ಒದ್ದಾಡುತ್ತಿರುವುದಂತೂ ಖರೆ.

ಉದ್ಯೋಗವಿಲ್ಲದೆ ಒದ್ದಾಡುವವರು

ಆಟೋ ಚಾಲಕರು

ಖಾಸಗಿ ವಾಹನ ಮಾಲೀಕ, ಚಾಲಕ, ಕ್ಲೀನರ್

ಕಟ್ಟಡ ಕಾಮರ್ಿಕರು
*ಬಾರ್, ಮಾಲ್, ಚಿತ್ರಮಂದಿರ, ಬಿಗ್ ಬಜಾರ್, ಸಣ್ಣ-ಪುಟ್ಟ ಅಂಗಡಿ ಸೇರಿ ವಿವಿಧೆಡೆ ಕೆಲಸ ಮಾಡುವವರು

ಹಳ್ಳಿಗಳಿಂದ ನಗರ-ಪಟ್ಟಣಕ್ಕೆ ಕೆಲಸ ಅರಸಿ ಬಂದವರು

ಬಳೆ ಮಾರುವವರು, ಕಾಪರ್ೆಂಟರ್, ಹೂವು ಮಾರುವವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net