

ಶನಿವಾರಸಂತೆ: ನಿಡ್ತ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಸೋಮವಾರ ಜಾಗೃತಿ ಸಂದೇಶಗಳನ್ನು ಸಾರುತ್ತಾ ಪರಿಸರ ಸ್ನೇಹಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸಿದರು.
ಹಣತೆ ಹಚ್ಚೋಣ, ಪಟಾಕಿ ತ್ಯಜಿಸೋಣ, ಪರಿಸರ ಉಳಿಸೋಣ ಎಂಬ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಹಸಿರು ದೀಪಾವಳಿ ಆಚರಣೆಗೆ ಸಂಕಲ್ಪ ಮಾಡಿದರು. ಶಾಲಾ ಕೊಠಡಿಯಲ್ಲಿ ಹಣತೆಗಳನ್ನು ಹಚ್ಚಿದರು. ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಎಂ.ವಿ.ರೂಪಾ, ಪ್ರಿಯಾಂಕ ಚಿಪಳೊಣಕರ್, ಡಿ.ಎಂ. ಮಹಾದೇವಿ, ಎಚ್.ವಿ. ಅಭಿಷೇಕ್ ಹಾಜರಿದ್ದರು.
ಸುಪ್ರಜ ಗುರುಕುಲ: ಶನಿವಾರಸಂತೆಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ದೀಪಗಳನ್ನು ಹಚ್ಚಿ ಹಬ್ಬ ಆಚರಿಸಿದರು. ವಿದ್ಯಾರ್ಥಿಗಳಿಗೆ ಹತ್ತಿಯಿಂದ ಬತ್ತಿ ತಯಾರಿಸುವುದನ್ನು ಶಿಕ್ಷಕರು ತೋರಿಸಿಕೊಟ್ಟರು. ಪ್ರಾಂಶುಪಾಲೆ ಡಿ.ಸುಜಲಾದೇವಿ, ಶಿಕ್ಷಕರು ಹಾಜರಿದ್ದರು.