ನಿಡ್ತ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಸಂತೆ

FEB 16 ss 1 makkala santhe
Published on

ಶನಿವಾರಸಂತೆ: ಸಮೀಪದ ನಿಡ್ತ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಮಕ್ಕಳ ಸಂತೆಯನ್ನು ನಡೆಸಲಾಯಿತು. ಶಾಲೆಯ ಆವರಣವನ್ನು ಸಂತೆ ಮಾರುಕಟ್ಟೆ ಮಾಡಿಕೊಂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಮನೆಗಳಲ್ಲಿ ಬೆಳೆದ ಸೊಪ್ಪು, ವಿವಿಧ ತರಕಾರಿಗಳು, ಗೆಡ್ಡೆ-ಗೆಣಸು, ಹಣ್ಣುಗಳು, ವಿವಿಧ ತಿಂಡಿ ತಿನಿಸುಗಳು, ತಂಪು ಪಾನಿಯ, ಐಸ್‌ಕ್ರಿಮ್ ಮುಂತಾದವುಗಳನ್ನು ತಂದು ಮಾರಾಟ ಮಾಡಿದರು.


ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪೈಪೋಟಿಗೆ ಬಿದ್ದು, ನಾನು ಕಡಿಮೆ ಬೆಲೆಗೆ ಕೊಡುತ್ತೇನೆ, ನನ್ನ ಹತ್ತಿರ ಕೊಂಡುಕೊಳ್ಳಿ ಎಂದು ಗ್ರಾಹಕರಿಗೆ ಕೂಗಿ ಕೂಗಿ ಹೇಳುತ್ತಿದ್ದರು. ನಿಡ್ತ ಗ್ರಾಮೀಣ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ತಮ್ಮ ಮನೆಗಳಲ್ಲಿ ಪೋಷಕರು ಬೆಳೆದ ತರಕಾರಿ, ಹಣ್ಣು ಹಂಪಲು ಇತರ ತಿಂಡಿ, ತಿನಿಸು ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದದ್ದು ವಿಶೇಷವಾಗಿತ್ತು. ಪಾಲಕರು, ಗ್ರಾಮಸ್ಥರು ಗ್ರಾಹಕರಾಗಿ ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು.


ಮಕ್ಕಳ ಸಂತೆಯನ್ನು ಗ್ರಾಮದ ಹಿರಿಯ ಸುಬ್ಬಪ್ಪ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಜಯಂತ್, ಮಾಜಿ ಜಿ.ಪಂ. ಸದಸ್ಯ ಡಿ.ಬಿ.ಧರ್ಮಪ್ಪ, ಹಂಡ್ಲಿ ಕ್ಲಸ್ಟರ್ ಸಿಆರ್‌ಪಿ ಮನೋಹರ್, ಎಸ್‌ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net