ನಿಜವಾದ ಕರೊನಾ ವಾರಿಯರ್ಸ್‌ಗಳು

23gbd12
Published on

ಗೌರಿಬಿದನೂರು: ಕರೊನಾ ಆತಂಕದ ನಡುವೆಯೂ ಪೌರಕಾರ್ಮಿಕರು ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದು ಅವರ ಸೇವೆ ಅನನ್ಯವಾದದ್ದು ಎಂದು ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದರು.

ನಗರದ ಹೊರವಲಯದ ಇಡಗೂರು ರಸ್ತೆಯಲ್ಲಿರುವ ಕಸ ವಿಲೇವಾರಿ ಘಟಕ ಆವರಣದಲ್ಲಿ ನಗರಸಭೆ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು. ನಿಜವಾದ ಕರೊನಾ ವಾರಿಯರ್ಸ್‌ ಗಳೆಂದರೆ ಪೌರ ಕಾರ್ಮಿಕರು ಮಾತ್ರ. ನಗರವನ್ನು ಸ್ವಚ್ಛಗೊಳಿಸುವ ಮೂಲಕ ಸೋಂಕು ಹರಡದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಪೌರಕಾರ್ಮಿಕ ಅರೋಗ್ಯ ಮತ್ತು ಅವರ ಕುಟುಂಬ ನಿರ್ವಹಣೆ ಸರ್ಕಾರದ ಜವಾಬ್ದಾರಿ ಅಗಿದೆ. ಪ್ರತಿಯೊಬ್ಬರಿಗೂ ವಸತಿ ಸೌಕರ್ಯ ನೀಡಲು ಜಿಲ್ಲಾಡಳಿತ ಬದ್ದವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಥಾಧಿಕಾರಿ ಮಿಥುನ್‌ಕುಮಾರ್ ಮಾತನಾಡಿ, ಪೌರಕಾರ್ಮಿಕರು ಇಲ್ಲದ ಸಮಾಜ ಊಹಿಸಲು ಸಾಧ್ಯವಿಲ್ಲ. ಒಂದು ದಿವಸ ಕಸ ತೆಗೆಯದಿದ್ದರೆ ಅಂದು ನಗರ ಗಲೀಜುನಿಂದ ತುಂಬಿರುತ್ತದೆ.ಅದ್ದರಿಂದ ನೀವು ಇತರರ ಮಾದರಿಯಾಗಿದ್ದಿರಿ ಎಂದು ತಿಳಿಸಿದರು.ಪೌರಾಯುಕ್ತ ಜಿ.ಎನ್.ಚಲಪತಿ , ತಹಸೀಲ್ದಾರ್ ಎಂ.ರಾಜಣ್ಣ, ಯೋಜನಾ ನಿರೀಕ್ಷಕಿ ರೇಣುಕಾ, ನಗರಸಭೆ ಸದಸ್ಯರಾದ ಸಪ್ತಗಿರಿ, ರಮೇಶ್, ಮೈಲಾರಿ ರಾಜಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net