

ಚಿತ್ರದುರ್ಗ: ಕ್ವೀಟ್‌ಇಂಡಿಯಾ ಚಳವಳಿ ನೆನಪು ಹಾಗೂ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ಬುಧವಾರ ಚಿತ್ರದುರ್ಗ ತಾಲೂ ಕು ಕೂನಬೇವು ಗ್ರಾಮದ ಸ್ವಾತಂತ್ರ್ಯಹೋರಾಟಗಾರರ ಎ.ಭೀಮಪ್ಪ ಅವರನ್ನು ಅವರ ನಿವಾಸದಲ್ಲಿ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭೀಮಪ್ಪ ಅವರು,ತುರುವನೂರು ಪ್ರಾಥಮಿಕ ಶಾಲೆ ವಿದ್ಯಾರ್ಥಿ,ಆ ಸಂದರ್ಭದದಲ್ಲಿ ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರು ಆಗಮಿಸಿ,ಗ್ರಾಮದ ಆಂಜನೇಯ ದೇಗುಲದಲ್ಲಿ ಮಾಡಿದ್ದ ಭಾಷಣ,ಹೋರಾಟಕ್ಕೆ ಇಳಿಯಲು ಪ್ರೇರಣೆಯಾ ಯಿತು. ಈಚಲು ಮರದ ಸತ್ಯಾಗ್ರಹದ ಅಂಗವಾಗಿ ಈಚಲು ಮರಗಳನ್ನು ನಾಶ ಮಾಡಲಾಯಿತು. ಆಗ ನನ್ನನ್ನು ಬಂಧಿಸಿ,ಗಡಿಪಾರು ಮಾಡಲಾಗಿತ್ತು. ಆದರೂ ಹೋರಾಟದಲ್ಲಿ ಭಾಗಿಯಾಗಿದ್ದೇ ಎಂದರು. ತಹಸೀಲ್ದಾರ್ ಡಾ.ನಾಗವೇಣಿ,ಉಪ ತಹಸೀಲ್ದಾರ್‌ಪ್ರಕಾಶ್,ಆ ರ್‌ಐ ಎಂ.ಎಸ್.ಸ್ವಾಮಿ,ಗ್ರಾಮ ಆಡಳಿತಾಧಿಕಾರಿ ಶೋಭಾ ಮತ್ತಿತರರು ಇದ್ದರು.