ನಿಜಲಿಂಗಪ್ಪ ನಿವಾಸಕ್ಕೆ ಡಿಸಿ ಭೇಟಿ,ಪರಿಶೀಲನೆ

ctd--vinaya
Published on

ಚಿತ್ರದುರ್ಗ:ಈಚೆಗೆ ರಾಜ್ಯಸರ್ಕಾರ ಖರೀದಿಸಿದಿಸಿರುವ ರಾಷ್ಟ್ರೀಯ ನಾಯಕ ಎಸ್.ನಿಜಲಿಂಗಪ್ಪ ಅವರ ನಗರದಲ್ಲಿರುವ ನಿವಾಸಕ್ಕೆ ಜಿ ಲ್ಲಾಧಿಕಾರಿ ಟಿ.ವೆಂಕಟೇಶ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ನಗರದ ವಿಪಿ ಬಡಾವಣೆಯಲ್ಲಿರುವ ಮಾಜಿ ಸಿಎಂ ನಿಜಲಿಂಗಪ್ಪ ಅವರ ನಿವಾಸ ‘ವಿನಯ’ವನ್ನು ಖರೀದಿಸಿ ಅದನ್ನು ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಬೇಕೆಂಬ ಕಾರಣಕ್ಕೆ ಐದು ಕೋಟಿ ರೂ. ಅನುದಾನವನ್ನು ಹಿಂದೆಯೇ ಸರ್ಕಾರ ಬಿಡುಗಡೆ ಮಾಡಿತ್ತು.

ಇನ್ನೇನು ಸರ್ಕಾರ ಈ ನಿವಾಸವನ್ನು ತನ್ನ ಹೆಸರಿಗೆ ನೋಂದಣಿ ಮಾಡಿಕೊಳ್ಳ ಬೇಕು ಎನ್ನುವ ಸಂದರ್ಭದಲ್ಲಿ ಎದುರಾಗಿದ್ದ ತಾಂತ್ರಿಕ ತೊ ಡಕಿನ ಕಾರಣಕ್ಕೆ ನೋಂದಣಿ ಪ್ರಕ್ರಿಯೆ ಮುಂದೂಡಲಾಗಿತ್ತು. ಇದರಿಂದ ಬೇಸರಗೊಂಡಿದ್ದ ನಿಜಲಿಂಗಪ್ಪರ ಪುತ್ರ ಕಿರಣ್‌ಶಂಕರ್ ಸರ್ಕಾರಕ್ಕೆ ಮನೆ ಮಾರಾಟ ಮಾಡುವುದಿಲ್ಲ ಎಂದಿದ್ದರು.

ಏತನ್ಮಧ್ಯೆ ಪಕ್ಷಕ್ಕೆ ಈ ನಿವಾಸವನ್ನು ಖರೀದಿಸಲು ಕಾಂಗ್ರೆಸ್ ಚಿಂತನೆ ನಡೆಸಿತ್ತು. ಈ ನಿಟ್ಟಿನಲ್ಲಿ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರು ಕೆಲ ತಿಂಗ ಳ ಹಿಂದೆ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು,ಎದುರಾಗಿದ್ದ ತಾಂತ್ರಿಕ ತೊಡಕುಗಳನ್ನು ನಿವಾರಿಸಿ ಮನೆಯನ್ನು ಸರ್ಕಾರಕ್ಕೆ ಖರೀದಿಸಲು ಪ್ರಯತ್ನಿಸಿದ್ದರ ಫಲವಾಗಿ ಸರ್ಕಾರವೇ ಈಗ ಇದನ್ನು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಲು ಅವಕಾಶ ದೊರೆತಂತಾಗಿದೆ. ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಟ್ರಸ್ಟಿ ಕೆಇಬಿ ಷಣ್ಮುಖಪ್ಪ ಅವರು ನಿವಾಸ ಕೀಯನ್ನು ಡಿಸಿಗೆ ಹಸ್ತಾಂತರಿಸಿದರು. ಎಡಿಸಿ ಬಿ.ಟಿ.ಕುಮಾರಸ್ವಾಮಿ ಇತರರು ಇದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net