

ಮುಗಳಖೋಡ: ಮಾಳಿ&ಮಾಲಗಾರ ನಿಗಮ ಸ್ಥಾಪನೆ ಆಗುವವರೆಗೂ ವಿಶ್ರಮಿಸುವುದಿಲ್ಲ ಎಂದು ಮಾಳಿ&ಮಾಲಗಾರ ಸಮುದಾಯದ ನಿಯೋಗದ ಅಧ್ಯ ಡಾ.ಸಿ.ಬಿ.ಕುಲಿಗೋಡ ಹೇಳಿದರು.
ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂದ ಮಾಧವಾನಂದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಮಾಳಿ&ಮಾಲಗಾರ ಚುನಾಯಿತ ಅಭ್ಯರ್ಥಿಗಳಿಗೆ ಸತ್ಕರಿಸಿ ಅವರು ಮಾತನಾಡಿದರು. ಸಮುದಾಯದ ಅಭಿವೃದ್ಧಿಗೆ ರಾಜಕೀಯ ಮರೆತು ಪಾತೀತವಾಗಿ ಕೈಜೋಡಿಸಿ ನಿಗಮ ಸ್ಥಾಪನೆ ಶ್ರಮಿಸೋಣ. ಸ್ಥಾಪನೆಯಾಗದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸತ್ಯಾಗ್ರಹ ಕುಳಿತು ಹೋರಾಡೋಣ. ಜೀವ ಬಿಟ್ಟರೂ ಸಮುದಾಯದ ನಿಗಮ ಸ್ಥಾಪನೆ ಮಾಡದೆ ಬಿಡಲಾರೆವು ಎಂದರು.
ಸಾಹಿತಿ ಡಾ.ವಿ.ಎಸ್.ಮಾಳಿ ಮಾತನಾಡಿ, ಸಮುದಾಯದವರು ಚುನಾವಣೆಗಳಲ್ಲಿ ಹೆಚ್ಚೆಚ್ಚು ಆಯ್ಕೆಯಾಗುತ್ತಿರುವುದು ಹೆಮ್ಮೆಯ ಎಂದರು. ರಾಜ್ಯಾಧ್ಯ ಕಾಡು ಮಾಳಿ ಪ್ರಾಸ್ತಾವಿಕ ಮಾತನಾಡಿದರು.ಗ್ರಾಪಂ ಮತ್ತು ಪಿಕೆಪಿಎಸ್ಗಳಿಗೆ ಆಯ್ಕೆಯಾದ ಸಮುದಾಯದ ಅಧ್ಯ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಪ್ರೊ.ಪ್ರಕಾಶ ಕಂಬಾರ, ಅಪ್ಪಾಸಾಬ ಕುಲಿಗುಡೆ ಇತರರಿದ್ದರು.