ನಿಗದಿತ ಸ್ಥಳದಲ್ಲೇ ಪ್ರಜಾಸೌಧ ನಿರ್ಮಿಸಿ

Build a public building at the designated location.
Build a public building at the designated location.
Published on

ರಬಕವಿ/ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಂದಿದ್ದು, ತಾಲೂಕಾಡಳಿತ ಮತ್ತು ಶಾಸಕ ಸಿದ್ದು ಸವದಿ ಅನಗತ್ಯವಾಗಿ ವಿಳಂಬ ಮಾಡದೆ ಈ ಪೂರ್ವದಲ್ಲಿ ಗುರುತಿಸಲಾದ ಜಾಗದಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕೆಂದು ರಬಕವಿ ವಿರಕ್ತಮಠದಲ್ಲಿ ಸಮಸ್ತ ದೈವಮಂಡಳದ ಮುಖ್ಯಸ್ಥರು ಮತ್ತು ಸಾರ್ವಜನಿಕರು ಆಗ್ರಹಿಸಿದರು.

ಬುಧವಾರ ಸಂಜೆ ನಡೆದ ಸಭೆಯಲ್ಲಿ ರಾಮಣ್ನ ಹುಲಕುಂದ ಮಾತನಾಡಿ, ರಬಕವಿ ನಗರದ ರಿ.ಸ.ನಂ. 63/ಬಿ ಕ್ಷೇತ್ರ 22.02 ಪೈಕಿ ಮದನಮಟ್ಟಿ ಗ್ರಾಮದ ಪುನರ್ವಸತಿ ಕೇಂದ್ರದ ನಿರ್ಮಾಣಕ್ಕೆ ಕಾಯ್ದಿಟ್ಟ ತಾತ್ಕಾಲಿಕ ನಿವೇಶನ ನಂ: 298 ಕ್ಷೇತ್ರ 14200.55 ಚದರ ಮೀಟರ್ ಜಾಗದಲ್ಲಿ ತಾಲೂಕಾಡಳಿತದ ಎಲ್ಲ ಕಚೇರಿಗಳನ್ನೊಳಗೊಂಡ ಪ್ರಜಾಸೌಧ ಕಟ್ಟಡ ನಿರ್ಮಿಸುವುದು ಸೂಕ್ತ ಎಂದು ಹೇಳಿದರು.

ರಬಕವಿ ಪವರ್ ಲೂಮ್ ಅಸೋಸಿಯೇಷನ್ ಅಧ್ಯಕ್ಷ ನೀಲಕಂಠ ಮುತ್ತೂರ ಮಾತನಾಡಿ, ಕಳೆದ 7 ವರ್ಷಗಳಿಂದ ನಿಗದಿತ ಜಾಗ ಬಿಟ್ಟು ಬೇರೆಯವರ ಹಿತಾಸಕ್ತಿ ಹಿನ್ನೆಲೆಯಲ್ಲಿ ವೃಥಾ ಕಾಲಹರಣ ಮಾಡದೆ ತಾಲೂಕಿನ ಕೇಂದ್ರ ಸ್ಥಾನವಾಗಿರುವ ನಾಯಕರ ಗುಡ್ಡದಲ್ಲಿನ 10 ಎಕರೆ ಸಾರ್ವಜನಿಕ ಬಳಕೆಗೆ ಮೀಸಲಾಗಿರುವ ಮೂಲಸೌಕರ್ಯಗಳನ್ನೊಳಗೊಂಡ ಜಾಗದಲ್ಲಿ ಪ್ರಜಾಸೌಧ ನಿರ್ಮಿಸಬೇಕೆಂದರು.

ನಗರದ ಹಿರಿಯರಾದ ಮಲ್ಲೇಶಪ್ಪ ಕುಚನೂರ, ಸಂಜಯ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೇಲಿ, ಶಿವಾನಂದ ಬಾಗಲಕೋಟಮಠ, ಬಸವರಾಜ ತೆಗ್ಗಿ, ಮಹಾದೇವ ದೂಪದಾಳ, ಚಿದಾನಂದ ಸೊಲ್ಲಾಪುರ, ರಾಯಪ್ಪ ಹೆಗ್ಗನ್ನವರ, ಸದಾಶಿವ ನಾಯಕ, ಡಾ.ರವಿ ಜಮಖಂಡಿ, ಪ್ರಭು ಪೂಜಾರಿ, ವೆಂಕಟೇಶ ಮಮದಾಪುರ, ಚೆನಬಸು ಬಿಜಾಪುರ ಹಾಗೂ ರಬಕವಿ ಜನತೆ ಭಾಗಿಯಾಗಿ ಸರ್ವಾನುಮತದಿಂದ ಒಪ್ಪಿಗೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net