ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸಿ

21 HBD 1
ಹುಮನಾಬಾದ್‌ನ ಧನಗರಗಡ್ಡ ಬಡಾವಣೆಯಲ್ಲಿ ಶನಿವಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ೫ ಲಕ್ಷ ಸಾಮರ್ಥ್ಯವುಳ್ಳ ನೀರು ಶೇಖರಣೆ ಘಟಕದ ಕಾಮಗಾರಿಗೆ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಭೂಮಿ ಪೂಜೆ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಪುರಸಭೆ ಅಧ್ಯಕ್ಷೆ ಪಾರ್ವತಿ ಶೇರಿಕಾರ, ಉಪಾಧ್ಯಕ್ಷ ಮುಕರಂ ಜಾ ಇತರರಿದ್ದರು.
Published on

ಹುಮನಾಬಾದ್: ಪಟ್ಟಣದ ಧನಗರಗಡ್ಡ ಬಡಾವಣೆಯಲ್ಲಿ ಶನಿವಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಮಂಜೂರಾಗಿದ್ದ ಅಂದಾಜು ವೆಚ್ಚ ೧.೨೬ ಕೋಟಿ ರೂ.ಗಳಲ್ಲಿ ೫ ಲಕ್ಷ ಸಾಮರ್ಥ್ಯವುಳ್ಳ ನೀರು ಶೇಖರಣೆ ಘಟಕದ ಕಾಮಗಾರಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಭೂಮಿ ಪೂಜೆ ನೇರವೇರಿಸಿ ಚಾಲನೆ ನೀಡಿದರು.

ನಂತರ ಮಾತನಾಡಿ, ಸರ್ಕಾರದ ಅನುದಾನ ಸದ್ಬಳಕೆಯಾಗುವ ಮೂಲಕ ಜನರಿಗೆ ಸದುಯೋಗವಾಗಬೇಕು. ಈ ನಿಟ್ಟಿನಲ್ಲಿ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ತಿಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಕಾಮಗಾರಿ ಗುಣಮಟ್ಟದಿಂದ ನಡೆಯುವಂತೆ ಹಾಗೂ ಅವಧಿ ಒಳಗೆ ಪೂರ್ಣಗೊಳಿಸಲು ಅಧಿಕಾರಿಗಳು ವಿಶೇಷ ಗಮನ ಹರಿಸಬೇಕೆಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಪಾರ್ವತಿ ಶೇರಿಕಾರ, ಉಪಾಧ್ಯಕ್ಷ ಮುಕರಂ ಜಾ, ಸದಸ್ಯರಾದ ಸುನೀಲ ಪಾಟೀಲ್, ವಿಜಯಕುಮಾರ ದುರ್ಗಾದ, ರಮೇಶ ಕಲ್ಲೂರ, ಗುಂಡಪ್ಪ, ನರಸಪ್ಪ, ಮಂಡಳಿಯ ಅಧಿಕಾರಿ ರವೀಂದ್ರ ಯಾಕಲಾರೆ, ಪುರಸಭೆ ಮುಖ್ಯಧಿಕಾರಿ ಫಿರೋಜ್ ಖಾನ್, ಪ್ರಮುಖರಾದ ಸಂತೋಷ ಪಾಟೀಲ್, ಮಲ್ಲಿಕಾರ್ಜುನ ಸೀಗಿ, ಗಿರೀಶ ತುಂಬಾ, ಅನಿಲ ಪಸರ್ಗಿ, ರವಿ ಹೊಸ್ಸಳ್ಳಿ, ಶಿವುರೆಡ್ಡಿ ಶಿವಪುರ, ಅಶೋಕ ಸೊಂಡೆ ಇತರರಿದ್ದರು.

ಹಳ್ಳಿಖೇಡ (ಬಿ): ಪಟ್ಟಣದಲ್ಲಿ ಶನಿವಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯೋಜನೆಯಡಿಯಲ್ಲಿ ೧.೨೪ ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ೨. ೫೦ ಲಕ್ಷ ಸಾಮರ್ಥ್ಯವುಳ್ಳ ನೀರು ಶೇಖರಣೆ ಘಟಕದ ಕಾಮಗಾರಿಗೂ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಪುರಸಭೆ ಅಧ್ಯಕ್ಷೆ ಜಗದೇವಿ ಶಲಂಕೆ, ಉಪಾಧ್ಯಕ್ಷೆ ನಾಸೀರಾ ಬೇಗಂ, ಸದಸ್ಯರಾದ ಚಾಂದ್ ಖುರೇಶಿ, ಆರೀಫ್ ಬಾವುಗಿ, ಮುಖ್ಯಧಿಕಾರಿ ಬಿ.ಶಂಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net