ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ

3 HBD 3
 ಹುಮನಾಬಾದ್ ತಾಲೂಕಿನ ಸಿಂಧನಕೇರಾ ಹತ್ತಿರ ಶನಿವಾರ ಸ್ವಚ್ಛ ಭಾರತ ಮಿಷನ್ ಯೋಜನೆಯ ಘನತ್ಯಾಜ್ಯ ಕಸ ವಿಲೇವಾರಿ ಘಟಕ ಕಾಮಗಾರಿ ಭೂಮಿಯನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ನೆರವೇರಿಸಿದರು. ಪುರಸಭೆ ಸದಸ್ಯರಾದ ವಿಜಯಕುಮಾರ ದುರ್ಗದ, ರಮೇಶ ಕಲ್ಲೂರ, ಅಧಿಕಾರಿ ಮೀನಾಕುಮಾರಿ ಇತರರಿದ್ದರು.
Published on

ಹುಮನಾಬಾದ್: ಘನತ್ಯಾಜ್ಯ ಕಸ ವಿಲೇವಾರಿ ಘಟಕ ಸ್ಥಾಪನೆಯಿಂದ ಸ್ಥಳೀಯ ಅಭಿವೃದ್ಧಿ ಮತ್ತು ಪ್ರಕೃತಿಯ ಸಂರಕ್ಷಣೆಗೆ ಮಹತ್ವದ ಪಾತ್ರವಹಿಸುತ್ತದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಪಟ್ಟಣ ಮತ್ತು ಹಳ್ಳಿಖೇಡ (ಬಿ) ಪುರಸಭೆ ವ್ಯಾಪ್ತಿಯಲ್ಲಿ ಶನಿವಾರ ಸುಮಾರು ೪ ಕೋಟಿ ರೂ.ಅನುದಾನದ ೨೦೨೩-೨೪ ನೇ ಸಾಲಿನ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್ ಯೋಜನೆಯ ಘನತ್ಯಾಜ್ಯ ಕಸ ವಿಲೇವಾರಿ ಘಟಕ ಕಾಮಗಾರಿಗೆ ಭೂಮಿ ನೆರವೇರಿಸಿ ಮಾತನಾಡಿದ ಅವರು, ಹುಮನಾಬಾದ್ ಪುರಸಭೆ ವ್ಯಾಪ್ತಿಯ ೭೮ ಲಕ್ಷ ರೂ. ಹಾಗೂ ಹಳ್ಳಿಖೇಡ (ಬಿ) ಪುರಸಭೆಯ ವ್ಯಾಪ್ತಿಯ ೦೩ ಕೋಟಿ ೧೪ ಲಕ್ಷ ರೂ. ಕಾಮಗಾರಿ ನಡೆಯಲಿದ್ದು, ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳ್ಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಹಳ್ಳಿಖೇಡ(ಬಿ) ಪುರಸಭೆಯ ಅಧ್ಯಕ್ಷೆ ಜಗದೇವಿ ಶಂಕೆ, ಸದಸ್ಯರಾದ ಯೂಸುಫ್ ಸೌದಗಾರ್, ಅರಿಫ್ ಬಾವಾಗಿ, ಸಾಜೀದ್ ಪಟೇಲ್, ಸುಶೀಲಾ ಮರಪಳ್ಳಿ, ಮುರಳಿ ಪೋಷನಗಿರಿ, ರಾಜು ಪಾಟೀಲ, ಸಂಜು ಪ್ರಭಾ, ಹುಮನಾಬಾದ್ ಪುರಸಭೆ ಸದಸ್ಯರಾದ ವಿಜಯಕುಮಾರ ದರ್ಗದ, ಸುನೀಲ ಪಾಟೀಲ, ರಮೇಶ ಕಲ್ಲೂರ, ಧನಲಕ್ಷ್ಮೀ ಘೋರಪಾಡೆ, ಮುಖ್ಯಾಧಿಕಾರಿ ಮಿನಾಕುಮಾರಿ , ಸುನೀಲಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net