ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಿ

15nlg_1
Published on

ನವಲಗುಂದ: ನವಲಗುಂದ ಪಟ್ಟಣದ ನೀರಾವರಿ ಕಾಲನಿಯಲ್ಲಿ ಎಆರ್​ಎಂ ಯೋಜನೆಯಡಿ 4.90 ಕೋ.ರೂ. ವೆಚ್ಚದದಲ್ಲಿ ನಿರ್ವಿುಸುತ್ತಿರುವ ನೀರಾವರಿ ಪ್ರವಾಸಿ ಮಂದಿರ ಕಾಮಗಾರಿಯನ್ನು ಶಾಸಕ, ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ ಮಂಗಳವಾರ ವೀಕ್ಷಿಸಿದರು.

ಬಳಿಕ ಮಾತನಾಡಿದ ಅವರು, ನಿರ್ಮಾಣ ಕಾಮಗಾರಿ ವಿಳಂಬ ಮಾಡದೇ ನಿಗದಿತ ಅವಧಿಯಲ್ಲಿ ಮುಗಿಸಬೇಕು. ಜತೆಗೆ ಒಳಾಂಗಣ ಕ್ರೀಡಾಂಗಣ ನಿರ್ವಿುಸಲು ಜಾಗ ಗುರುತಿಸಿಬೇಕು ಎಂದು ಇಂಜಿನಿಯರ್​ಗಳಾದ ಸಿ.ಎಂ. ಸಿದ್ರಾಮಶೆಟ್ಟರ್, ಎ.ಎನ್. ಹೊನ್ನಕೇರಿ, ಚೇತನ ಅವರಿಗೆ ಸೂಚಿಸಿದರು.

ದೀರ್ಘಕಾಲ ಬಾಳಿಕೆ ಬರುವಂಥ ಗುಣಮಟ್ಟದ ವಸ್ತುಗಳನ್ನು ಬಳಸಬೇಕು ಎಂದು ಗುತ್ತಿಗೆದಾರ ಡಿ.ವೈ. ಉಪ್ಪಾರ ಅವರಿಗೆ ಸೂಚಿಸಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಅಣ್ಣಪ್ಪ ಬಾಗಿ, ರಾಯನಗೌಡ ಪಾಟೀಲ, ಮಹಾಂತೇಶ ಕಲಾಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net