ನಿಖಿಲ್ ಸೋಲು ಪಾಪ ಎನಿಸುತ್ತಿದೆ: ಸಚಿವ ಕೆ.ವೆಂಕಟೇಶ್ ಟೀಕೆ

k.venkatesh
Published on

ಮೈಸೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ ನೋಡಿದರೆ ಪಾಪ ಎನ್ನಿಸುತ್ತದೆ ಎಂದು ರೇಷ್ಮೆ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿದರು.

ಚನ್ನಪಟ್ಟಣದಲ್ಲೂ ಅಲ್ಲಿಯ ಜನತೆ ನಿಖಿಲ್ ಅವರನ್ನು ಸೋಲಿಸಿದ್ದಾರೆ. ಸತತವಾಗಿ ಮೂರು ಬಾರಿ ಸೋಲಿಸಿರುವುದು ನೋಡಿದರೆ ಬೇಸರ ಆಗುತ್ತದೆ.

ಹೀಗಿರುವಾಗ ಎಚ್.ಡಿ.ಕುಮಾರಸ್ವಾಮಿ ನೋಡಿದರೆ ನಮಗೇಕೆ ಭಯವಾಗಲು ಸಾಧ್ಯ ಎಂದು ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಒಕ್ಕಲಿಗರ ಮಠದ ಶ್ರೀ ಕುಮಾರಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಕೇಸ್ ಹಾಕಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಶ್ರೀಗಳು ತಿಳಿವಳಿಕೆಯಿಂದ ಮಾತನಾಡಿದ್ದಾರೋ ಅಥವಾ ತಿಳಿವಳಿಕೆ ಇಲ್ಲದೆ ಮಾತನಾಡಿದ್ದಾರೋ ಗೊತ್ತಿಲ್ಲ. ಸ್ವಾಮೀಜಿ ತಿಳಿಯದೆ ಮಾತನಾಡಿದ್ದೇನೆಂದು ಕ್ಷಮೆ ಯಾಚಿಸಿದ್ದಾರೆ. ಇಲ್ಲಿಗೆ ಈ ವಿಷಯ ಮುಗಿದಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net