ನಿಖಿಲ ಗೆಲುವಿಗೆ ಕಾರ್ಯಕರ್ತರೆ ಕಾರಣ-ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ

21Hukkeri2
ಬೆಲ್ಲದ ಬಾಗೇವಾಡಿಯಲ್ಲಿ ಅಭಿಮಾನಿಗಳಿಂದ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿದರು. ಶಂಕರಗೌಡ ಪಾಟೀಲ, ನೇಮಣ್ಣ ಮಗದುಮ್ಮ, ಆನಂದ ಲಕ್ಕುಂಡಿ ಕಾಡಪ್ಪ ಮಗದುಮ್ಮ ಇತರರಿದ್ದರು.
Published on

ಹುಕ್ಕೇರಿ:ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಿಖಿಲ ಕತ್ತಿ ಭಾರಿ ಅಂತರದಲ್ಲಿ ಗೆಲವು ಸಾಧಿಸಿರುವುದಕ್ಕೆ ಕುಟುಂಬದ ಹಿತೈಷಿಗಳು, ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರ ಶ್ರಮವೇ ಕಾರಣ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಹುಕ್ಕೇರಿ ಕ್ಷೇತ್ರದಿಂದ ಶಾಸಕರಾಗಿ ನಿಖಿಲ್ ಕತ್ತಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕತ್ತಿ ಕುಟುಂಬದ ಬೆಂಬಲಿಗರಿಂದ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನೆ ಮತ್ತು ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. 40 ವರ್ಷದಿಂದ ಕ್ಷೇತ್ರದ ಜನ ನಮ್ಮನ್ನು ತಮ್ಮ ಕುಟುಂಬದ ಸದಸ್ಯರಂತೆ ಪರಿಗಣಿಸಿ ಬೆಂಬಲಿಸುತ್ತಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಾನು ಮತ್ತು ನಮ್ಮಣ್ಣ ದಿ. ಉಮೇಶ ಕತ್ತಿ ಸಾಕಷ್ಟು ಜನಪರ ಕಾರ್ಯ ಕೈಗೊಂಡಿದ್ದೇವೆ. ಕ್ಷೇತ್ರದ ಜನರ ಸಮಸ್ಯೆಗಲಿಗೆ ಹಗಲಿರುಳು ಸ್ಪಂದಿಸುತ್ತೇವೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಿಖಿಲ ಕತ್ತಿ 42,551 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಮುಖಂಡರು ನಿತ್ಯ ಬೆಲ್ಲದ ಬಾಗೇವಾಡಿಗೆ ಆಗಮಿಸಿ ಶಾಸಕ ನಿಖಿಲ ಕತ್ತಿ ಅವರ ಗೆಲುವಿನ ಚಾಣಕ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮತ್ತು ಸಹೋದರರಾದ ಪಥ್ವಿ ಹಾಗೂ ಪವನ ಕತ್ತಿ ಅವರನ್ನು ಸತ್ಕರಿಸಿ ಅಭಿನಂದಿಸುತ್ತಿದ್ದಾರೆ. ಶಂಕರಗೌಡ ಪಾಟೀಲ, ನೇಮಣ್ಣ ಮಗದುಮ್ಮ, ಆನಂದ ಲಕ್ಕುಂಡಿ, ಕಾಡಪ್ಪ ಮಗದುಮ್ಮ, ದಯಾನಂದ ವಂಟಮೂರಿ, ನಾಗಪ್ಪ ಮಗದುಮ್ಮ, ಪತ್ತೇಖಾನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net