ನಿಖರ ಮಾಹಿತಿ ನೀಡಲು ಮನವಿ

sidram vaghamare
Published on

ಹುಮನಾಬಾದ್: ಸರ್ಕಾರದಿಂದ ಗೋಂದಳಿ ಜನಾಂಗದವರ ಕುಲವರ್ಣನಾ ಅಧ್ಯಯನ ಯೋಜನೆಯಡಿ ಬೀದರ್ ಜಿಲ್ಲೆಗೆ ಗುರುವಾರ ಆಗಮಿಸುತ್ತಿರುವ ಸಂಶೋಧಕರಿಗೆ ಜನಾಂಗದ ವಂಶಪರಂಪರೆ ಬಗ್ಗೆ ಮಾಹಿತಿ ನೀಡಬೇಕೆಂದು ಗೋಂದಳಿ ಸಮಾಜ ಸಂಘಟನೆ ಅಧ್ಯಕ್ಷ ಸಿದ್ರಾಮ ವಾಘಾಮಾರೆ ತಿಳಿಸಿದ್ದಾರೆ. ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿAದ ಗೋಂದಳಿ, ಬುಡಬುಡುಕಿ, ಜೋಶಿ, ಭಟ್ಟಂಗಿ ಮತ್ತು ವಾಸುದೇವ ಸಮುದಾಯಗಳ ಕುಲಶಾಸ್ತಿಯ ಅಧ್ಯಯನ ಕುರಿತು ಸಂಶೋಧನೆ ನಡೆಯಲಿದ್ದು, ಜಿಲ್ಲೆಯ ಐದು ಸಮಾಜದವರು ನಿಖರ ಮಾಹಿತಿ ಒದಗಿಸಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net