ನಿಂಬರ್ಗಾದಲ್ಲಿ ವಾಂತಿ-ಭೇದಿ ನಿಯಂತ್ರಣ

klb2
ನಿಂಬರ್ಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ತಾಪಂ ಇಒ ಮಾನಪ್ಪ ಕಟ್ಟಿಮನಿ, ವೈದ್ಯಾಧಿಕಾರಿ ಡಾ.ಇರ್ಫಾನ್ ಇತರರಿದ್ದರು.
Published on

ಆಳಂದ: ನಿAಬರ್ಗಾ ಗ್ರಾಮದಲ್ಲಿ ಉಲ್ಬಣಿಸಿದ್ದ ವಾಂತಿ-ಭೇದಿ ಮಂಗಳವಾರ ನಿಯಂತ್ರಣಕ್ಕೆ ಬಂದಿದ್ದು, ಬಹುತೇಕ ಜನರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಾರೆ. ಸುಮಾರು 30-40 ಜನರಲ್ಲಿ ಇನ್ನು ಆರೋಗ್ಯ ಸಮಸ್ಯೆಯಿದ್ದು, ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ಕಲುಷಿತ ನೀರು ಸೇವನೆಯಿಂದ ಭಾನುವಾರ ತಡರಾತ್ರಿ ಸುಮಾರು 80-100 ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ಸೋಮವಾರವೂ ಸಮಸ್ಯೆ ಮುಂದುವರಿದಿತ್ತು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ತಾಲೂಕು ಆರೋಗ್ಯಾಧಿಕಾರಿ ಸುಶೀಲಕುಮಾರ ಅಂಬೂರೆ ಹಾಗೂ ಹಲವು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಅಗತ್ಯ ಸಲಹೆ- ಸೂಚನೆ ನೀಡಿದ್ದರು.

ಮುನೆಚ್ಚರಿಕೆ ಕ್ರಮವಾಗಿ ಗ್ರಾಮ ಪಂಚಾಯಿತಿ ಮಿನರಲ್ ವಾಟರ್ ಸರಬರಾಜು ಮಾಡಲಾಗುತ್ತಿದ್ದು, ಮಂಗಳವಾರ ಯಾರೊಬ್ಬರಲ್ಲೂ ಸಮಸ್ಯೆ ಕಾಣಿಸಿಲ್ಲ. ಘಟನೆಗೆ ಸಂಬAಧಿಸಿದAತೆ ಕರ್ತವ್ಯ ನಿರ್ಲಕ್ಷÈ ಆರೋಪದಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಕನ್ಯಾ ಅವರನ್ನು ಅಮಾನತು ಮಾಡಲಾಗಿದೆ.

ಗ್ರಾಪಂ ಆಡಳಿತಕ್ಕೆ ಚಾಟಿ ಬೀಸಿದ ಬಿಆರ್‌ಪಿ: ನಿಂಬರ್ಗಾ ಗ್ರಾಮ ಪಂಚಾಯಿತಿ ಆಡಳಿತ ಹಳಿತಪ್ಪಿದ್ದು, ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಜನರಿಗೆ ಶುದ್ಧ ನೀರು ಸರಬರಾಜು ಮಾಡುವಲ್ಲಿ ನಿರ್ಲಕ್ಷÈ ವಹಿಸಿದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ತಾಲೂಕು ಪಂಚಾಯಿತಿ ಅಧಿಕಾರಿಗೆ ಸೂಚನೆ ನೀಡಿದರು. ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ, ಕುಡಿಯುವ ನೀರಿನ ಟ್ಯಾಂಕ್ ಪರಿಶೀಲಿಸಿ, ಬಳಿಕ ಗ್ರಾಮ ಪಂಚಾಯಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು, ನೀರು ಸರಬರಾಜು ಮಾಡುವ ಪಂಪ್ ಆಪರೇಟರ್‌ಗಳು ತಿಂಗಳಿಗೊಮ್ಮೆ ವಾಟರ್ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಬ್ಲಿಚಿಂಗ್ ಫೌಡರ್ ಸಿಂಪಡಣೆ ಮಾಡಬೇಕು ಎಂದು ತಾಕೀತು ಮಾಡಿದರು. ಗ್ರಾಪಂ ಅಧ್ಯಕ್ಷೆ ರೇಖಾಬಾಯಿ ಚವ್ಹಾಣ್, ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ಜೆಜೆಎಂ ಇಇ ವೀರೇಂದ್ರ ನಾಯಕ, ಎಇಇ ವಿಜಯಕುಮಾರ, ಉಪ ತಹಸೀಲ್ದಾರ್ ಮಹೇಶ, ವೈದ್ಯಾಧಿಕಾರಿಗಳಾದ ಡಾ.ಸುಶ್ಮಿತಾ ಪಾಟೀಲ್, ಡಾ.ಇರ್ಫಾನ್, ಪಿಡಿಒ ಪ್ರವೀಣ್ ಇತರರಿದ್ದರು.

ಪಿಡಿಒ ಅಮಾನತು: ನಿಂಬರ್ಗಾದಲ್ಲಿ ವಾಂತಿ-ಭೇದಿ ಉಲ್ಬಣಗೊಂಡು ಸಮಸ್ಯೆ ಅನುಭವಿಸುವಲ್ಲಿ ಪಿಡಿಒ ನಿರ್ಲಕ್ಷÈವೇ ಕಾರಣವೆಂದು ಸ್ಥಳೀಯರು ದೂರು ನೀಡಿರುವುದು ಹಾಗೂ ಶಾಸಕರ ಸೂಚನೆ ಮೇರೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಕನ್ಯಾ ಅವರನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ ಪ್ರವೀಣ ಎಂಬುವವರನ್ನು ನೂತನ ಪಿಡಿಒ ಆಗಿ ನಿಯೋಜಿಸಲಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ಮಾನಪ್ಪ ಕಟ್ಟಿಮನಿ ಮಾಹಿತಿ ನೀಡಿದರು.

ಲೋಕಾಯುಕ್ತ ಅಧಿಕಾರಿಗಳು ಭೇಟಿ: ನಿಂಬರ್ಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಪಿಎಸ್‌ಐ ಅಕ್ಕಮಹಾದೇವಿ ಭೇಟಿ ನೀಡಿ, ಅಗತ್ಯ ಸೌಕರ್ಯ ಪರಿಶೀಲಿಸುವುದರ ಜತೆಗೆ ರೋಗಿಗಳಿಂದ ಆರೋಗ್ಯ ಸೇವೆ ಬಗ್ಗೆ ಮಾಹಿತಿ ಪಡೆದರು. ಗುಣಮಟ್ಟದ ಚಿಕಿತ್ಸೆ ಸಿಗುತ್ತಿರುವ ಬಗ್ಗೆ ಜನರ ಸಮಸ್ಯೆ ಆಲಿಸಿದರು. ಬಳಿಕ ವಾಟರ್ ಟ್ಯಾಂಕ್‌ಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದರು. ಎಎಸ್‌ಐ ರಾಜಶೇಖರ, ಎಚ್‌ಸಿ ಹಣಮಂತ, ಡಬ್ಲುÈಪಿಸಿ ಮಧುಮತಿ ಜತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net