

ಆಳಂದ: ರೈತರು ಹಾಗೂ ಗ್ರಾಮಸ್ಥರಿಗೆ ಅನಕೂಲವಾಗಲಿ ಎಂಬ ಉz್ದೆÃಶದಿಂದ 2021ರಲ್ಲಿ ನಿಂಬರ್ಗಾದಲ್ಲಿ ಕೆರೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ 2 ವರ್ಷ ಗತಿಸಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ನನೆಗುದಿಗೆ ಬಿದ್ದ ಕೆಲಸ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ಸೆ.6ರಂದು ನಿಂಬರ್ಗಾದಲ್ಲಿ ರಸ್ತಾ ರೋಕೋ ಹಮ್ಮಿಕೊಳ್ಳಲಾಗಿದೆ ಎಂದು ಸರ್ವ ಸಮಾಜ ಕಲ್ಯಾಣ ಸಮಿತಿ ಅಧ್ಯಕ್ಷ ವಿಠ್ಠಲ ಕೋಣೆಕರ್ ಹೇಳಿದರು.
ಕೆರೆ ಕಾಮಗಾರಿಗೆ 2.54 ಕೋಟಿ ರೂ. ಹಣ ಮೀಸಲಿಡಲಾಗಿತ್ತು. ಸದ್ಯ ಶೇ.30 ಕಾಮಗಾರಿ ಮಾಡಿದ್ದು, ಇದಕ್ಕೆ 1.16 ಕೋಟಿ ರೂ. ಖರ್ಚು ಮಾಡಲಾಗಿದೆ. ಇದು ಕಳಪೆಯಿಂದ ನಡೆದಿದೆ. ಕೆರೆಗೆ ಎಡ ಮತ್ತು ಬಲ ಬದಿಯಲ್ಲಿ ಕರಿ ಕಲ್ಲುಗಳ ಬಳಸಬೇಕಾಗಿತ್ತು. ಆದರೆ ಮುರುಮ ಹಾಕಿದ್ದಾರೆ. ಕಂಬದ ವಾಲ್‌ಗಳು ಭಾಗಿವೆ. ಕೆರೆಗಾಗಿ ಭೂಮಿ ಕಳೆದುಕೊಂಡ ಕೆಲ ರೈತರಿಗೆ ಪರಿಹಾರ ಸಿಕ್ಕಿಲ್ಲ. ಕಾಮಗಾರಿ ಬಗ್ಗೆ ನಿರ್ಲಕ್ಷÈ ವಹಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮಕೈಗೊಂಡು, ಉಳಿದ ಕಾಮಗಾರಿ ಶೀಘ್ರ ಮುಗಿಸಿಬೇಕು. ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪ್ರಮುಖರಾದ ಚಂದ್ರಕಾAತ ದುಗೊಂಡ, ಸೂರ್ಯಕಾಂತ ಕಂಠೆಕೋರೆ, ಭದ್ರಯ್ಯ ಸ್ವಾಮಿ, ಖಾದರ್‌ಸಾಬ್ ಲದಾಪ್ ಇತರರಿದ್ದರು.