ನಿಂದಕರಿದಲೇ ಮುಂದೆ ಹೋಗಲು ಸಾಧ್ಯ

ydg06
Published on

ಯಾದಗಿರಿ: ನಿಂದಕರಿಗೆ ಉತ್ತರಿಸುವ ಬದಲಿಗೆ ಜನರ ನಡುವೆ ಇದ್ದು ಕೆಲಸ ಮಾಡುವ ರಾಜಕಾರಣಿ ಬಹು ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯುತ್ತಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಮಂಗಳವಾರ ರಾತ್ರಿ ನಗರದ ಹೊರ ವಲಯದಲ್ಲಿ ಗುರುಮಠಕಲï ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಅವರು ಆಯೋಜಿಸಿದ್ದ ವಿಶೇಷ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ನಿಷ್ಕಲ್ಮಶವಾದ ಮನಸ್ಸಿಟ್ಟುಕೊಂಡು ನಡೆದಾಗ ಆ ವ್ಯಕ್ತಿ ಅತ್ಯಂತ ಕಡಿಮೆ ಸಮಯದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ. ಶಾಸಕ ಮಿತ್ರ ಶರಣಗೌಡ ಸಹ ಈ ವಿಚಾರ ಅಳವಡಿಸಿಕೊಂಡಲ್ಲಿ ಎತ್ತರಕ್ಕೆ ಬೆಳೆಯಬಹುದು ಎಂದರು.
ಕAದಕೂರ ಕುಟುಂಬ ರಾಜಕೀಯದಲ್ಲಿ ಅತ್ಯಂತ ಸೂಕ್ಷö್ಮ ಮತ್ತು ಶುದ್ಧಹಸ್ತವಿಟ್ಟು ಬೆಳೆದಿದೆ. ದಿ.ಸದಾಶಿವರಡ್ಡಿ ಕಂದಕೂರ ಅವರಿಗೆ, ಮಾಜಿ ಸಿಎಂ ರಾಮಕೃಷ್ಣ ಹೆಗಡೆ, ದೇವೇಗೌಡರು ಮತ್ತು ಎಸ್ .ಆರ್.ಬೊಮ್ಮಾಯಿ ಅವರು ಎದ್ದು ನಿಂತು ಗೌರವ ಕೊಡುತ್ತಿದ್ದರು. ಅದರಂತೆ, ಮಾಜಿ ಶಾಸಕ ದಿ.ನಾಗನಗೌಡ ಕಂದಕೂರ ಕೂಡ ಒಬ್ಬ ಪ್ರಾಮಾಣಿಕ ರಾಜಕಾರಣಿ. ಸಾಕಷ್ಟು ಏಳುಬೀಳು ಕಂಡವರು ಎಂದು ಸ್ಮರಿಸಿದರು.

ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಕೇಂದ್ರದಲ್ಲಿ ಸೋಮಣ್ಣನವರು ಮತ್ತು ನಮ್ಮ ಹಿರಿಯರಾದ ಎಚ್.ಡಿ.ಕುಮಾರಸ್ವಾಮಿ ಅವರು ಲವ-ಕುಶರಂತೆ ಅಭಿವೃದ್ಧಿಗೆ ಕಂಕಣಬದ್ಧರಾಗಿz್ದÁರೆ. ನಿಮ್ಮಿಬ್ಬರಿಂದ ಈ ಭಾಗ ಸರ್ವತೋಮುಖ ಅಭಿವೃದ್ಧಿ ಹೊಂದಲಿದೆ ಎಂಬ ಆಶಾಭಾವ ನಮ್ಮದಾಗಿದೆ ಎಂದು ಹೇಳಿದರು.

ಯಾದಗಿರಿ ಮತ್ತು ರಾಯಚೂರು ಮಹತ್ವಾಕಾಂಕ್ಷಿ ಜಿ¯್ಲೆ ಎಂದು ಘೊಷಿಸಿ, ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಮನ್ನಣೆ ನೀಡಿz್ದÁರೆ. ಬಿಜೆಪಿ- ಜೆಡಿಎಸ್ ಒಂದು ನಾಣ್ಯದ ಎರಡು ಮುಖಗಳಂತೆ ಅಭಿವೃದ್ಧಿಗೆ ಶ್ರಮಿಸಲಿದೆ ಎಂದರು.

ಯಾದಗಿರಿಗೆ ಮುಂದಿನ ಹತ್ತು ವರ್ಷಗಳಾದರೂ ಯಾರೊಬ್ಬ ಜನಪ್ರತಿನಿಧಿ ವಂದೇ ಭಾರತ್ ರೈಲು ನಿಲುಗಡೆ ಮಾಡುತ್ತಿರಲಿಲ್ಲ. ಆದರೆ ಸೋಮಣ್ಣ ಅವರು ಕೈಗೊಂಡ ದಿಟ್ಟ ನಿರ್ಧಾರದಿಂದ ಈ ಕೆಲಸವಾಗಿದೆ ಎಂದರು.

ಮಾಜಿ ಶಾಸಕ ಡಾ.ಎ.ಬಿ.ಮಾಲಕರಡ್ಡಿ, ಜೆಡಿಎಸ್ ಜಿ¯್ಲÁಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ಹಿರಿಯರಾದ ಎಸ್.ಬಿ.ಪಾಟೀಲï, ಜಿಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮಾರಡ್ಡಿ ಅನಪುರ್, ನಾಗರತ್ನ ಅನಪುರ, ಅಮೀನ್ ರಡ್ಡಿ ಯಾಳಗಿ ಇತರರಿದ್ದರು. ಅಮರಯ್ಯಾ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net