

ಎಂಎನ್ ಎಸ್ ಕಾರ್ಯಕರ್ತರ ಪುಂಡಾಟ
ಸಾರಿಗೆ ಬಸ್ ತಡೆದು ಉದ್ಧಟತನ
ಮರಾಠಿ ಭಾಷೆಯಲ್ಲಿ ಮಾತನಾಡಲಿಲ್ಲವೆಂದು ಸಾರಿಗೆ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿರುವುದು ರಾಜ್ಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.ಇದರ ಜತೆಗೆ ಮಹಾರಾಷ್ಟ್ರದ ನಾಸಿಕದಲ್ಲಿ ರಾಜ್ಯದ ಸಾರಿಗೆ ಬಸ್ ತಡೆದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಕಾರ್ಯಕರ್ತರು ಶನಿವಾರ ಫುಂಡಾಟ ನಡೆಸಿದ್ದಾರೆ.
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ರಾಜ್ಯದಲ್ಲಿ ಸಾರಿಗೆ ಇಲಾಖೆ ಕಂಡಕ್ಟರ್ ಮೇಲೆ ಹಲ್ಲೆ ಘಟನೆ ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಸದ್ಯ ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಸಾರಿಗೆ ಬಸ್ ಸಂಚಾರವನ್ನು ಮಹಾರಾಷ್ಟ್ರ ಸರ್ಕಾರ ಸ್ಥಗಿತಗೊಳಿಸಿದೆ.
ಸಾರಿಗೆ ಇಲಾಖೆ ಕಂಡಕ್ಟರ್ ಮೇಲೆ ಮರಾಠಿ ಫುಂಡರ ಹಲ್ಲೆ ಖಂಡಿಸಿ,ರಾಜ್ಯದ ಕೆಲವಡೆ ಮಹಾರಾಷ್ಟ್ರ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡಿಸಲಾಗಿತ್ತು.ಇದರ ಬೆನ್ನಲೆ ,ಕೊಲ್ಲಾಪುರ ,ಹಾಗೂ ನಾಸಿಕ ನಗರದಲ್ಲಿ ರಾಜ್ಯದ ಸಾರಿಗೆ ಬಸ್ ತಡೆದು ಭಗವಾ ಧ್ವಜ ಅಳವಡಿಸಿ,ನಾಸಿಕದಲ್ಲಿ ಬಸ್ ಗೆ ಕಪ್ಪು ಮಸಿ ಬಳೆದು ಪುಂಡಾಟ ಮೆರೆಯಲಾಗಿದ್ದು,ಸದ್ಯ ಗಡಿಯಲ್ಲಿ ಸಾರಿಗೆ ಸಂಚಾರಕ್ಕೆ ಅಡ್ಡಿಯಾಗಿದೆ.
ಗಡಿಯಲ್ಲಿ ಸಾರಿಗೆ ಸಂಚಾರ ಅಸ್ತವ್ಯಸ್ತ: