ನಾವೂ ಶಕ್ತಿ ಪ್ರದರ್ಶನ ಮಾಡ್ತೇವೆ  ಸಿಎಂಗೆ ಶಾಮನೂರು ಸವಾಲು

Screenshot_2023-12-16-23-41-56-749_com.android.chrome.jpg
Published on

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದುರ್ಗದಲ್ಲಿ ಅಹಿಂದ ಶಕ್ತಿ ಪ್ರದರ್ಶನ ನಡೆಸುವುದಾದರೆ ದಾವಣಗೆರೆಯಲ್ಲಿ ವೀರಶೈವ ಮಹಾಧಿವೇಶನದ ಮೂಲಕ ನಾವೂ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದರು.

ದಾವಣಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಜಾತಿ ಗಣತಿ ಬಿಡುಗಡೆಗೆ ಅಧಿವೇಶನದ ಮೂಲಕ ಒಕ್ಕೊರಲಾಗಿ ವಿರೋಧ ವ್ಯಕ್ತಪಡಿಸಲಿದ್ದೇವೆ ಎಂದು ತಿಳಿಸಿದರು.

ಜಾತಿಗಣತಿ ವರದಿ ಬಿಡುಗಡೆಗೊಳಿಸದಂತೆ 73 ಲಿಂಗಾಯತ ಶಾಸಕರ ಪೈಕಿ 60ಕ್ಕೂ ಹೆಚ್ಚು ಶಾಸಕರ ಸಹಿ ಹಾಕಿಸಿ, ಸಿಎಂಗೆ ನೀಡಿದ್ದೇವೆ. ವರದಿ ಅವೈಜ್ಞಾನಿಕವಾಗಿದೆ ಎಂದೂ ತಿಳಿಸಲಾಗಿದೆ. ಆದರೆ ಸಿಎಂ ‘ನಾನೇ ವರದಿ ನೋಡಿಲ್ಲ, ನೀವು ಈಗಲೇ ವಿರೋಧ ಮಾಡುತ್ತೀರಾ’ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ನಾನು ಹಿರಿಯ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜಾತಿಗಣತಿ ವಿಚಾರದಲ್ಲಿ ನನಗೆ ಏನನ್ನೂ ಹೇಳಿಲ್ಲ ಎಂದ ಎಸ್ಸೆಸ್, ವರದಿ ಬಿಡುಗಡೆಯಾದಲ್ಲಿ ಎಲ್ಲರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದೂ ತಿಳಿಸಿದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net