ನಾವಿನ್ನೂ ಬ್ರಿಟಿಷರ ಮನಸ್ಥಿತಿಯಿಂದ ಹೊರ ಬಂದಿಲ್ಲ

ಫೋಟೋ ಶೀರ್ಷಿಕೆ 16ಸಿಆರ್_ಪಿ-3ಎ
ಚನ್ನರಾಯಪಟ್ಟಣದಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 77ನೇ ಸ್ವಾತಂತ್ರೃ ದಿನ ಆಚರಿಸಲಾಯಿತು. ಡಾ.ವಿ.ಮಹೇಶ್, ಡಾ.ಕಿಶೋರ್ ಇತರರು ಇದ್ದರು.
Published on

ಚನ್ನರಾಯಪಟ್ಟಣ: ಹೋರಾಟಗಾರರ ಶ್ರಮದ ಫಲವಾಗಿ ಸ್ವಾತಂತ್ರೃ ಸಿಕ್ಕಿದ್ದರೂ ನಾವಿನ್ನೂ ಬ್ರಿಟಿಷರ ಮನಸ್ಥಿತಿಯಿಂದ ಹೊರಬರಲಾಗಿಲ್ಲದಿರುವುದು ದುರಂತ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವಿ.ಮಹೇಶ್ ವಿಷಾದಿಸಿದರು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ 77ನೇ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ಐಕ್ಯತೆ, ಸಮಾನತೆಯನ್ನು ಕಾಪಾಡಿಕೊಳ್ಳುವುದು ಪ್ರತಿ ಭಾರತೀಯನ ಕರ್ತವ್ಯವಾಗಿರಬೇಕು. ಸ್ವಾತಂತ್ರೊೃೀತ್ಸವ ಎಂಬುದು ಹಬ್ಬವಿದ್ದಂತೆ. ಪ್ರತಿ ವರ್ಷ ಆಚರಿಸುವ ನಾವು, ಈ ಹಬ್ಬಕ್ಕೆ ಕಾರಣವಾದ ಹಿರಿಯರ ತ್ಯಾಗ, ಹೋರಾಟಗಳನ್ನು ತಿಳಿಯಬೇಕು. ದೇಶದ ಸಮಗ್ರತೆಗೆ ಪ್ರತಿ ಧರ್ಮ, ಜಾತಿಗಳು ಸೇರಿ ಒಂದಾಗಿ ಹೆಜ್ಜೆ ಹಾಕಬೇಕೆಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್ ಮಾತನಾಡಿ, ನಾವು ಎಷ್ಟೇ ಒತ್ತಡದ ಕೆಲಸವಿದ್ದರೂ, ಸ್ವಾತಂತ್ರೊೃೀತ್ಸವವನ್ನು ಆಚರಿಸಬೇಕು ಎಂದರು. ಸಾರ್ವಜನಿಕ ಆಸ್ಪತ್ರೆಯ ನೌಕರರು, ಪಟ್ಟಣದ ಲಯನ್ಸ್ ಸಂಸ್ಥೆ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net