ನಾಳೆ‌‌ ಸಚಿವರೊಬ್ಬರ ಅಕ್ರಮ ಬಯಲಿಗೆ ಕುಮಾರಸ್ವಾಮಿ ಬಾಂಬ್

IMG-20220921-WA0032
Published on


ಕಲಬುರಗಿ: ರಾಜ್ಯ ಸರ್ಕಾರದ ಸಚಿವರೊಬ್ಬರು ನಿಯಮ ಉಲ್ಲಂಘಿಸಿ, ಅಧಿಕಾರ ದುರುಪಯೋಗ ಮಾಡಿಕೊಂಡು ಮಾಡಿರುವ ಕೆಲಸ ಕುರಿತು ನಾಳೆ ದಾಖಲೆಗಳನ್ನು ಸಮೇತ
ಅಕ್ರಮ ಬಯಲಿಗೆ ಎಳೆಯುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಬಾಂಬ್ ಸಿಡಿಸಿದರು.

ಕಲಬುರಗಿ ನಗರದ ವಿಮಾನ ನಿಲ್ದಾಣದಲ್ಲಿ ಬುಧವಾರ ಪತ್ರಕರ್ತರ ಜತೆಗೆ ಮಾತನಾಡಿ, ಸದನದಲ್ಲಿಯೇ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ನಾಳೆಯವರಗೂ ಕಾಯಿರಿ ಎಂದು ಹೇಳಿದರು. ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಲಿದೆ.

ಯಾವ ಸಚಿವರು, ಅವರ ಹೆಸರು ಎಲ್ಲ ನಾಳೆ ಸದನದಲ್ಲಿ ಬಹಿರಂಗ ಮಾಡುವೆ. ನಾನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಲ್ಲ, ಹಿಟ್ ಆ್ಯಂಡ್ ರನ್ ಅಲ್ಲ ಎಂದರು.

ನನ್ನ ಬಗ್ಗೆ ಹಗುರವಾಗಿ ಮತ್ತು ಏಕವಚನ ದಲ್ಲಿ ನನ್ನ ಬಗ್ಗೆ ಮಾತನಾಡಿರುವ ಆ ಸಚಿವರಿಗೆ ಇದು ನಮ್ಮ ಶಾಂಪಲ್‌ ಮಾತ್ರ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡುವೆ ಎಂದರು.

ಜೆಡಿ ಎಸ್ ರಾಜ್ಯಾದ್ಯಕ್ಷ ಸಿ.ಎಂ.ಇಬ್ರಾಹಿಂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net