ನಾಳೆವರೆಗೆ ಜಿಲ್ಲಾಡಳಿತ ಸೀಲ್‌ಡೌನ್; ಸಿಬ್ಬಂದಿಗೆ ರ‌್ಯಾಡಂ ಪರೀಕ್ಷೆ; ಇಂದು ಅಥವಾ ನಾಳೆ ವರದಿ

1
Published on

ಬೆಂಗಳೂರು ಗ್ರಾಮಾಂತರ: ಜಿಲ್ಲಾಧಿಕಾರಿಗೆ ಕರೊನಾ ದೃಢಪಟ್ಟ ಬಳಿಕ ಜಿಲ್ಲಾಡಳಿತ ಭವನದ ಬಹುತೇಕ ಸಿಬ್ಬಂದಿಗೆ ಕರೊನಾ ತಪಾಸಣೆ ಮಾಡಲಾಗಿದ್ದು, ಶನಿವಾರ ಹಾಗೂ ಭಾನುವಾರ ವರದಿ ಬರಲಿದೆ. ಇವೆರಡು ದಿನ ಜಿಲ್ಲಾಡಳಿತ ಭವನದ ಸಿಬ್ಬಂದಿಗೆ ನಿರ್ಣಾಯಕ ದಿನವಾಗಿದ್ದು, ಸಿಬ್ಬಂದಿ ಮನದಲ್ಲಿ ಭಯ ಆರಂಭವಾಗಿದೆ.

ಈಗಾಗಲೇ ಡಿಸಿ ಅವರ ಕಾರು ಚಾಲಕ, ಗನ್ ಮ್ಯಾನ್ ಸೇರಿ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಉಳಿದಂತೆ ದ್ವಿತೀಯ ಸಂಪರ್ಕದ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಭಾನುವಾರದವರೆಗೆ ಜಿಲ್ಲಾಡಳಿತ ಭವನವನ್ನು ಸೀಲ್‌ಡೌನ್ ಮಾಡಲಾಗಿದೆ. ಕೆಲವು ಪ್ರಮುಖ ಅಧಿಕಾರಿಗಳು ಕ್ಷೇತ್ರಗಳಲ್ಲಿ ಕೆಲಸ ಮುಂದುವರಿಸಿದ್ದಾರೆ. ಸೋಮವಾರ ಎಂದಿನಂತೆ ಕೆಲಸ ಕಾರ್ಯಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆತಂಕ ಬೇಡ: ಜಿಲ್ಲಾಡಳಿತ ಭವನದ ಪ್ರತಿ ಕೊಠಡಿಗಳಲ್ಲಿ ಕರೊನಾ ನಿಯಮ ಪಾಲನೆ ಕಟ್ಟುನಿಟ್ಟಾಗಿದೆ. ಪ್ರತಿ ಕೊಠಡಿಯಲ್ಲಿ ಸ್ಯಾನಿಟೈಸರ್ ಇಡಲಾಗಿದೆ. ಸಾರ್ವಜನಿಕ ಕೆಲಸ ಕಾರ್ಯಗಳಲ್ಲೂ ಕಟ್ಟುನಿಟ್ಟಿನ ಪಾಲನೆ ಇರುವುದರಿಂದ ಯಾರೂ ಆತಂಕಗೊಳ್ಳಬೇಕಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ. ನಾಯಕ್ ತಿಳಿಸಿದ್ದಾರೆ.

ಎ್ಐಆರ್ ಕ್ರಮ: ಹಲವೆಡೆ ಸಾರ್ವಜನಿಕರು ಕರೊನಾ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ ಅಂಥವರ ವಿರುದ್ಧ ಎ್ಐಆರ್ ದಾಖಲಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಹೋಂ ಕ್ವಾರಂಟೈನ್ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ 20 ಮಂದಿ ವಿರುದ್ಧ ಪ್ರಕರಣ ದಾಖಲಿಸಿದೆ. ಪೊಲೀಸರೂ ಸಹ ಲಾಠಿ ಹಿಡಿದಿದ್ದು ಕರೊನಾ ನಿಯಮ ಉಲ್ಲಂಘನೆ ವ್ಯಕ್ತಿಗಳಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.

ಲಾಕ್‌ಡೌನ್‌ಗೆ ಚಿಂತನೆ: ಹೊಸಕೋಟೆಯಲ್ಲಿ ಕರೊನಾ ಪ್ರಕರಣ ಅಂಕೆ ಮೀರುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೆ ಸರ್ಕಾರದ ಕರ್ಯ್ೂ ಜತೆಗೆ ಮಧ್ಯಾಹ್ನ 2 ಗಂಟೆ ಬಳಿಕ ಲಾಕ್‌ಡೌನ್ ಘೋಷಿಸಲಾಗಿದೆ. ಪರಿಸ್ಥಿತಿ ತಹಬಂದಿಗೆ ಬರದಿದ್ದರೆ ಜಿಲ್ಲೆಯ ಪ್ರಮುಖ ಜಾಗಗಳಲ್ಲಿ ಲಾಕ್‌ಡೌನ್ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.

ಜಿಲ್ಲಾಡಳಿತ ಸಿಬ್ಬಂದಿ ಆತಂಕಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಕಟ್ಟಡವನ್ನು ಸ್ಯಾನಿಟೈಸೇಷನ್ ಮಾಡಲಾಗಿದೆ. ಕರೊನಾ ಟೆಸ್ಟಿಂಗ್ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಡಾ.ಜಗದೀಶ್ ಕೆ.ನಾಯಕ್, ಅಪರ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net