ನಾಳೆಯೇ ಕಾಲುವೆಗೆ ನೀರು ಬಿಡಿ

clu
Published on

ಕೊಪ್ಪಳ:ತುಂಗಭದ್ರಾ ಜಲಾಶಯ ಅಚ್ಚುಕಟ್ಟು ವ್ಯಾಪ್ತಿ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದು, ಜಲಾಶಯಕ್ಕೂ ನಿರೀಕ್ಷೆಯಂತೆ ನೀರು ಹರಿದು ಬರುತ್ತಿದೆ. ಹೀಗಾಗಿ ನಾಳೆ (ಜು.29)ರಿಂದಲೇ ಕಾಲುವೆಗಳಿಗೆ ನೀರು ಹರಿಸಬೇಕೆಂದು ಕೃಷಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಸವರಾಜ ಬಿಲ್ಗಾರ್ ಒತ್ತಾಯಿಸಿದರು.


ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.


ಸದ್ಯ ಜಲಾಶಯದಲ್ಲಿ 54 ಟಿಎಂಸಿ ನೀರಿದೆ. ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಒಳಹರಿವಿದೆ. ಇದರಿಂದ ಜಲಾಶಯ ಭರ್ತಿಯಾಗುವುದರಲ್ಲಿ ಅನುಮಾನವಿಲ್ಲ. ರೈತರು ಈಗಾಗಲೇ ಸಸಿ ಹಾಕಿಕೊಂಡಿದ್ದಾರೆ. 45 ದಿನದಲ್ಲಿ ನಾಟಿ ಮಾಡದಿದ್ದಲ್ಲಿ ಪ್ರಯೋಜನವಿಲ್ಲದಂತಾಗುತ್ತದೆ. ತಡವಾದಲ್ಲಿ ಫಸಲು ಸರಿಯಾಗಿ ಬರುವುದಿಲ್ಲ. ಈ ಹಂತದಲ್ಲಿ ನೀರು ಬಿಡದಿದ್ದಲ್ಲಿ ಮುಂದೆ ಜಲಾಶಯದಿಂದ ಹೆಚ್ಚಿನ ನೀರು ನದಿ ಪಾಲಾಗಲಿದೆ ಎಂದರು.


ಕೂಡಲೇ ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರು ಬಿಡುಗಡೆ ಮಾಡಬೇಕು. ಕಾಲುವೆ ರಿಪೇರಿ ಸೇರಿ ಇತರ ಕಾಮಗಾರಿ ಈಗ ಕೈಗೆತ್ತಿಕೊಳ್ಳಬಾರದು. ಕೇವಲ ಗುತ್ತಿಗೆದಾರರ ಯೋಗ ಕ್ಷೇಮ ನೋಡುವ ಬದಲು ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ತಕ್ಷಣದಿಂದ ನೀರು ಬಿಡದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ಸಂಘದ ಪದಾಧಿಕಾರಿಗಳಾದ ಹನುಮಂತಪ್ಪ ಹಂಚಿನಾಳ, ಈರಣ್ಣ ಕುರಿ, ಉಪೇಂದ್ರ ನಾಯಕ, ಮೋಹನ್ ಕುರಿ, ಶಂಕ್ರಪ್ಪ ವಜ್ರಬಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net