29ರಿಂದ ಶರಣರ ಮೌಲಿಕ ಚಿಂತನೆ, ಉಪನ್ಯಾಸ ಮಾಲೀಕೆ, ಶ್ರಾವಣ ಚಿಂತನೆ

bekkina kalmatt sree
Published on

ಶಿವಮೊಗ್ಗ: ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಟ್ರಸ್ಟ್ ಮತ್ತು ಗುರುಬಸವ ಅಧ್ಯಯನ ಪೀಠದ ಸಹಯೋಗದಲ್ಲಿ ಜು.29ರಿಂದ ಸೆಪ್ಟೆಂಬರ್ 10ರವರೆಗೆ ಸಂಜೆ 6.30ಕ್ಕೆ ಶರಣರ ಮೌಲಿಕ ಚಿಂತನೆ, ಉಪನ್ಯಾಸ ಮಾಲೀಕೆ, ಮನೆ-ಮನೆಗಳಲ್ಲಿ ಶ್ರಾವಣ ಚಿಂತನೆ ಕಾರ್ಯಕ್ರಮ ನಗರದ ವಿವಿಧೆಡೆ ನಡೆಯಲಿದೆ ಎಂದು ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಪ್ರಸಕ್ತ ವರ್ಷ ಪ್ರಚಲಿತ ವಿದ್ಯಮಾನಗಳ ವಚನಾಧರಿತ ಚಿಂತನೆಗಳ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ನಾಲ್ಕು ದಶಕಗಳಿಂದ ಶರಣರ ವಚನಗಳ ವ್ಯಾಖ್ಯಾನ ಮಾಸವನ್ನಾಗಿ ವೈವಿದ್ಯಮಯ ಮತ್ತು ಅರ್ಥಪೂರ್ಣವಾಗಿ ಭಕ್ತರ ಮನೆಗಳಲ್ಲಿ ಶ್ರಾವಣ ಮಾಸವನ್ನು ಆಚರಿಸಲಾಗುತ್ತಿದೆ. ಅದೇ ಮಾದರಿ ಈ ಬಾರಿಯೂ ವಿಶಿಷ್ಠವಾಗಿ ಶ್ರಾವಣ ಚಿಂತನೆ ಮಾಡಲಾಗುವುದು ಎಂದು ಬೆಕ್ಕಿನಕಲ್ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜು. 29ರಂದು ಸಂಜೆ 6.30ಕ್ಕೆ ಶಂಕರಮಠ ರಸ್ತೆಯ ಓಂ ಗಣೇಶ್ ಟ್ರ್ಯಾಕ್ಟರ್ ಶೋ ರೂಮ್‌ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಟಿ.ಪಟ್ಟಾಭಿರಾಮ್ ಮತ್ತು ಎಂಎಲ್ಸಿ ಡಿ.ಎಸ್.ಅರುಣ್ ಭಾಗವಸುವರು ಎಂದರು.

ಜು.30ರಂದು ಎಲ್ಬಿಎಸ್ ನಗರದಲ್ಲಿ ಮಹಾನಗರ ಪಾಲಿಕೆ ಸದಸ್ಯ ಇ.ವಿಶ್ವಾಸ್ ಅವರ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಬಸವಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಶಾಸಕ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಎಂಎಲ್ಸಿ ಎಸ್.ರುದ್ರೇಗೌಡ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಭಾಗಿಯಾಗುವರು. ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಹಾಮನಿ ಪಾಲ್ಗೊಳ್ಳುವರು ಎಂದರು.

ಜು.31ರಿಂದ ನಡೆಯುವ ಶ್ರಾವಣ ಚಿಂತನ ಕಾರ್ಯಕ್ರಮ ವಿವಿಧ ಬಡಾವಣೆಗಳಲ್ಲಿ ನಡೆಯಲಿದೆ. ಪ್ರತಿಯೊಬ್ಬರ ಮನೆಯಲ್ಲೂ ಉಪನ್ಯಾಸಕರಿಂದ ವಚನಾಧಾರಿತ ಚಿಂತನೆ, ವಚನ ಸಂಗೀತ, ಶ್ರೀ ಬೆಕ್ಕಿನಕಲ್ಮಠ ಅಲ್ಲಮರಂಗದಿಂದ ವಚನ ರೂಪಕ, ಸಂವಾದ ಮತ್ತು ಶ್ರೀಗಳ ಆಶೀರ್ವಚನ ಇರಲಿದೆ ಎಂದು ಹೇಳಿದರು. ಮಹಾನಗರ ಪಾಲಿಕೆ ಸದಸ್ಯ ಇ.ಕಾಂತೇಶ್, ಉದ್ಯಮಿ ಹರ್ಷ ಕಾಮತ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net