

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದಲ್ಲಿ ಶ್ರೀಬಸವೇಶ್ವರ ಜಾತ್ರಾ ಮಹೋತ್ಸವ ಆ.೧೦, ೧೧ರಂದು ನಡೆಯಲಿದೆ.
೧೦ ರಂದು ಬೆಳೆಗ್ಗೆ ೮ ಗಂಟೆಗೆ ಬಸವೇಶ್ವರ ಗದ್ದುಗೆಗೆ ಮಹಾಭಿಷೇಕ ಹಾಗೂ ವಿಶೇಷ ಪೂಜೆ ಕಾರ್ಯಕ್ರಮ, ೯ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಜೋಳದ ಚೀಲ ಎತ್ತುವ, ರಂಗೋಲಿ, ಮ್ಯೂಜಿಕ್ ಚೇರ್ ಹಾಗೂ ಗಡಿಗೆ ಒಡೆಯುವ ಸ್ಪರ್ಧೆ ಜರುಗಲಿವೆ. ೧೧ರಂದು ಬೆಳೆಗ್ಗೆ ೬ ಗಂಟೆಗೆ ಬಸವೇಶ್ವರ ಗದ್ದುಗೆಗೆ ಅಭಿಷೇಕ ಹಾಗೂ ಪೂಜೆ ಕಾರ್ಯಕ್ರಮ, ೮ ಗಂಟೆಗೆ ಪಲ್ಲಕ್ಕಿ ಉತ್ಸವ, ೯ ಗಂಟೆಗೆ ವಚನ ಸ್ಪರ್ಧೆ, ಬಳಿಕ ೧೦ ಗಂಟೆಗೆ ವಿವಿಧ ಗ್ರಾಮಗಳಿಂದ ಆಗಮಿಸಿದ ಭಜನಾ ಕಲಾವಿದರಿಂದ ಪದಗಳ ಕಾರ್ಯಕ್ರಮ ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.